ಉತ್ತರ ಪ್ರದೇಶದ ನೋಯ್ಡಾದ ಮಹಿಳಾ ಪ್ಯಾರಾಗ್ಲೈಡರ್ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಬಿರ್-ಬಿಲಿಂಗ್ ಬೆಟ್ಟಗಳಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಾವು ಕಂಡಿದ್ದಾರೆ.
ಮೃತರನ್ನು ಭಾರತೀಯ ವಾಯುಪಡೆಯ(ಐಎಎಫ್) ಮಾಜಿ ಅಧಿಕಾರಿ ಅಶುತೋಷ್ ಚೋಪ್ರಾ ಅವರ ಪತ್ನಿ 56 ವರ್ಷದ ರಿತು ಚೋಪ್ರಾ ಎಂದು ಗುರುತಿಸಲಾಗಿದೆ.
ಭಾನುವಾರ ಈ ಘಟನೆ ನಡೆದಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ರಿತು ಅವರ ಪ್ಯಾರಾಗ್ಲೈಡರ್ ಹತ್ತಿರದ ಬೆಟ್ಟಗಳಲ್ಲಿ ಅಪಘಾತಕ್ಕೀಡಾಯಿತು, ಅದರ ನಂತರ ಅಶುತೋಷ್ ಎಚ್ಚರಿಕೆ ನೀಡಿದ್ದು, ಮಹಿಳೆಯನ್ನು ಪತ್ತೆಹಚ್ಚಲು ಶೋಧ ತಂಡವನ್ನು ರಚಿಸಲಾಯಿತು. ಹುಡುಕಾಟದ ಬಳಿಕ ಆಕೆಯನ್ನು ಪತ್ತೆ ಹಚ್ಚಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ರೀತು ಪ್ಯಾರಾಗ್ಲೈಡಿಂಗ್‌ನಲ್ಲಿ ಒಂಬತ್ತು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅಪಘಾತದ ದಿನ ನಾವಿಬ್ಬರೂ ಹಾರುತ್ತಿದ್ದೆವು. ನಾನು ಅವಳಿಗಿಂತ ಮೇಲೆ ಸ್ವಲ್ಪ ಮೇಲಿದ್ದೆ. ಇದ್ದಕ್ಕಿದ್ದಂತೆ, ಭಾರಿ ಗಾಳಿ ಅವಳಿಗೆ ಮತ್ತು ನಂತರ ನನಗೆ ಅಪ್ಪಳಿಸಿತು. ಆ ಸಮಯದಲ್ಲಿ ಅವಳ ಸಂಪೂರ್ಣ ಗ್ಲೈಡರ್ ಕುಸಿದು ಅವಳು ಪರ್ವತದ ಇಳಿಜಾರಿನ ಮೇಲೆ ಬಿದ್ದಳು. ನಾವು ಸುಮಾರು 9000 ಅಡಿ ಎತ್ತರದಲ್ಲಿದ್ದೆವು ಎಂದು ಅಶುತೋಷ್ ಹೇಳಿದ್ದಾರೆ.
ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್-ಬಿಲಿಂಗ್‌ಗೆ ದಂಪತಿಗಳು ಆಗಮಿಸಿದ್ದರು. ಚೋಪ್ರಾಸ್ ಮದುವೆಯಾಗಿ 34 ವರ್ಷಗಳಾಗಿದ್ದು, ನೋಯ್ಡಾದ ಸೆಕ್ಟರ್ 25 ನಿವಾಸಿಗಳಾಗಿದ್ದರು. ಸ್ಥಳೀಯ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್‌ನ ಸದಸ್ಯರ ಪ್ರಕಾರ ಅನುಭವಿ ಪ್ಯಾರಾಗ್ಲೈಡರ್ ಆಗಿರುವ ರಿತು, ತಜ್ಞರು ಫ್ಲೈಯರ್‌ಗಳ ಜೊತೆಯಲ್ಲಿರುವ ಜಾಯ್ ರೈಡ್ ಗಳಿಗಿಂತ ಭಿನ್ನವಾಗಿ ಏಕಾಂಗಿಯಾಗಿ ಹಾರಿದ್ದರು ಎನ್ನಲಾಗಿದೆ.