ನೋಯ್ಡಾ ನಿವಾಸಿ ರೋಹನ್ ತ್ಯಾಗಿ ಸಾಕು ನಾಯಿಯನ್ನ ಕೇದಾರನಾಥ ದರ್ಶನಕ್ಕೆ ಕರೆದುಕೊಂಡು ಹೋಗಿದ್ದು, ಹಿಂದು ಸಂಘಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇವರ ಮೇಲೆ ಬದ್ರಿ ಕೇದಾರ ಮಂದಿರ ಸಮಿತಿಯವರು ಕಾನೂನು ಕ್ರಮ ತೆಗೆದುಕೊಂಡು FIR ಕೂಡಾ ದಾಖಲು ಮಾಡಿಸಿದ್ದಾರೆ.
ರೋಹನ್ತ್ಯಾಗಿ ಒರ್ವ ಹವ್ಯಾಸಿ ಬ್ಲಾಗರ್. ಸಾಮಾನ್ಯವಾಗಿ ಇವರು ಪ್ರಯಾಣ ಮಾಡುವಾಗಲೆಲ್ಲ ತಮ್ಮ ಜೊತೆ ಶ್ವಾನವನ್ನ ಕರೆದುಕೊಂಡು ಹೋಗ್ತಿರ್ತಾರೆ. ಅದೇ ರೀತಿ ಕೇದಾರನಾಥಗೂ ಸಹಜವಾಗಿ ಕರೆದುಕೊಂಡು ಬಂದಿದ್ಧಾರೆ.
ಅದೇ ನೋಡಿ ಅವರು ಮಾಡಿದ್ದ ಎಡವಟ್ಟು, ರೋಹನ್ ತ್ಯಾಗಿ ಕೇದಾರನಾಥಗೆ ಕರೆದುಕೊಂಡು ಹೋಗಿ, ಅಲ್ಲಿದ್ದ ನಂದಿಯನ್ನ ಶ್ವಾನದಿಂದ ಸ್ಪರ್ಶಿಸಿ ಪೂಜೆ ಮಾಡಿಸಿದ್ದಾರೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಅವರ ಮೇಲೆ FIR ದಾಖಲಿಸಲಾಗಿದ್ದರೂ, ಕೆಲವರು ಅವರಿಗೆ ನಿರಂತರವಾಗಿ ಜೀವ ಬೆದರಿಕೆಯನ್ನ ಹಾಕುತ್ತಿದ್ದಾರೆ.
ಜೀವ ಭಯದಿಂದಾಗಿ ಈಗ ಅವರು ಪ್ರಧಾನಿ ಮೋದಿ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ಸಿಂಗ್ ಧಾಮಿಯವರಿಗೆ ಪತ್ರ ಬರೆದು ತಮಗೆ ರಕ್ಷಣೆ ಕೊಡುವಂತೆ ಹೇಳಿದ್ದಾರೆ.
ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರೋ ಈ ವಿಡಿಯೋ ನೋಡಿ ರೋಹನ್ ತ್ಯಾಗಿ ಮತ್ತು ಅವರ ಪತ್ನಿ ಹಿಮಾಂಶಿಯವರಿಗೆ ನಿರಂತರ ಜೀವ ಬೆದರಿಕೆ ಬರುತ್ತಲೇ ಇದೆ. ಈ ಕಾರಣಕ್ಕಾಗಿ ಅವರು ಹೊರಗಡೆ ಓಡಾಡೋದಕ್ಕೂ ಭಯ ಪಡುತ್ತಿದ್ದಾರೆ.