ಉತ್ತರಪ್ರದೇಶ ನೋಯ್ಡಾದಲ್ಲಿನ ನಿರ್ಮಾಣ ಹಂತದಲ್ಲಿರುವ ಅಕ್ರಮ 40 ಮಹಡಿ ಬೃಹತ್ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೆಡವಲು ಸಣ್ಣ ಸ್ಪೋಟಕ ಬಳಸಿ ನೆಲಸಮ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇದೆ ಮಾದರಿಯಲ್ಲಿ ಕೇರಳ ಹಾಗು ತಮಿಳುನಾಡಿನಲ್ಲಿ ಬಳಸಿ ಕಟ್ಟಡಗಳನ್ನು ನೆಲಸಮ ಮಾಡಲಾಗಿತ್ತು.
ನೋಯ್ಡಾದ ಸೂಪರ್ ಟೆಕ್ ಎಮರಾಲ್ಡ್ ಕಟ್ಟಡವು 40 ಮಹಡಿ ಇದ್ದು, 1000 ಫ್ಲ್ಯಾಟ್ಸ್ ಇದೆ. ಇದನ್ನು ಮೂರು ತಿಂಗಳಲ್ಲಿ ನೆಲಸಮ ಮಾಡಬೇಕೆಂದು ಕೋರ್ಟ್ ಆದೇಶಿಸಿದೆ. ಇದರ ವೆಚ್ಚವನ್ನು ಕಂಪನಿಯೇ ಭರಿಸತಕ್ಕದ್ದು ಎಂದು ಹೇಳಿದೆ. ಈ ತಂತ್ರಜ್ಞಾನದಲ್ಲಿ ಕೆಲವು ಗೋಡೆಗಳನ್ನು ಕೆಡವಿ, ಕಟ್ಟಡಗಳನ್ನು ದುರ್ಬಲಗೊಳಿಸಿ, ಕಂಬಗಳಲ್ಲಿ ಸ್ಫೋಟಕ ಜೋಡಿಸಿ ನಂತರ ಟೈಮರ್ ಮತ್ತು ರಿಮೋಟ್ ಬಳಸಿ ಕೆಡವಲಾಗುತ್ತದೆ. ಸ್ಫೋಟಕ ಮಾಡುವಾಗ 100 ಮೀ ಆಸುಪಾಸಿನಲ್ಲಿ ಯಾರನ್ನು ಬಿಡಲಾಗುವುದಿಲ್ಲ.
ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ವಿಧಿವಶ
ಸಣ್ಣ ಸ್ಫೋಟಕ ಕಟ್ಟಡದ ವಿವಿಧೆಡೆ ಬಳಸಿ ಬೃಹತ್ ಕಟ್ಟಡಗಳನ್ನು ಅತ್ಯಂತ ಸುರಕ್ಷತೆಯಲ್ಲಿ ಕೆಡವಿ, ಅವಶೇಷಗಳನ್ನು ಆವರಣದೊಳಗೆ ಬೀಳಿಸಬಹುದಾದ ತಂತ್ರಜ್ಞಾನ ಪ್ರಪಂಚದಾದ್ಯಂತ ಪ್ರಚಲಿತದಲ್ಲಿದೆ. ಭಾರತದಲ್ಲಿ ಇದರ ಬಳಸುವಿಕೆ ಪ್ರಮಾಣ ಕಡಿಮೆ ಇದ್ದು , ಇದಕ್ಕೆ ಹೆಚ್ಚಿನ ತಯಾರಿ ಅಗತ್ಯವಿದೆ .