
ಗ್ರೇಟರ್ ನೋಯ್ಡಾದ ನಿರಾಲಾ ಆಸ್ಪೈರ್ ಸೊಸೈಟಿಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಇದೇ ಅಪಾರ್ಟ್ಮೆಂಟ್ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ಎಂಟು ವರ್ಷದ ಬಾಲಕ ಟ್ಯೂಷನ್ ಮುಗಿದ ಬಳಿಕ ತನ್ನ ಮನೆಗೆ ತೆರಳಲು ಸೈಕಲ್ ಸಮೇತ ಲಿಫ್ಟ್ ಗೆ ಹೋಗಿದ್ದಾನೆ.
ಈತ 14ನೇ ಫ್ಲೋರ್ ನಲ್ಲಿ ವಾಸವಾಗಿದ್ದು, ಲಿಫ್ಟ್ ನಾಲ್ಕು – ಐದು ಫ್ಲೋರ್ ನಡುವೆ ಸ್ಟ್ರಕ್ ಆಗಿದೆ. ಈ ವೇಳೆ ಗಾಬರಿಗೊಂಡ ಬಾಲಕ ಎಮರ್ಜೆನ್ಸಿ ಬಟನ್ ಒತ್ತಿದ್ದಾನೆ. ಅಲ್ಲದೆ ಇಂಟರ್ಕಾಂ ಮೂಲಕ ಸೆಕ್ಯೂರಿಟಿಗೆ ಸಂಪರ್ಕಿಸಲು ಯತ್ನಿಸಿದ್ದಾನೆ.
ಆದರೆ ಸಿಸಿ ಟಿವಿ ಕೋಣೆಯಲ್ಲಿದ್ದ ವ್ಯಕ್ತಿ ಆ ಸಂದರ್ಭದಲ್ಲಿ ಹೊರಗೆ ಹೋಗಿದ್ದು, ಹೀಗಾಗಿ ಬಾಲಕನಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಹತಾಶನಾದ ಬಾಲಕ ಅಳುತ್ತಾ ಕೂಗಿಕೊಂಡಿದ್ದು, 10 ನಿಮಿಷಗಳ ಬಳಿಕ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಧಾವಿಸಿ ಬಾಲಕನಿಗೆ ನೆರವಾಗಿದ್ದಾರೆ.