ಕೊರೊನಾ ಕಾಲದ ನಂತರ ಚಾರ್ ಧಾಮ್ ಯಾತ್ರೆಗೆ ಈ ಬಾರಿ ಅನುಮತಿ ಕೊಡಲಾಗಿದೆ. ದೂರದೂರಿನಿಂದ ಸಾವಿರಾರು ಭಕ್ತಾದಿಗಳು ಸಾಗರೋಪಾದಿಯಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಬಂದ ಭಕ್ತರಲ್ಲಿ, ಓರ್ವ ಭಕ್ತ ತಮ್ಮ ಜೊತೆ ಶ್ವಾನವೊಂದನ್ನ ಹೊತ್ತಿಕೊಂಡು ಬಂದಿದ್ದಾರೆ. ಅದೇ ಶ್ವಾನದಿಂದ ಕೇದಾರನಾಥ್ ಮುಂದಿರೋ ನಂದಿಯ ಪೂಜೆ ಮಾಡಿಸಿದ್ದಾರೆ. ಆ ಪೂಜೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಿದೆ.
ನೋಯ್ಡಾ ನಿವಾಸಿಯಾಗಿಯರೋ 33 ವರ್ಷದ ರೋಹನ್ ತ್ಯಾಗಿ, ತಮ್ಮ ಜೊತೆ ನವಾಬ್ ಅನ್ನೊ ನಾಲ್ಕುವರೆ ವರ್ಷದ ಮುದ್ದಿಯ ಹಸ್ಕಿ ತಳಿಯ ಶ್ವಾನವನ್ನ ಕೇದಾರನಾಥ್ ದೇಗುಲಕ್ಕೆ ಹೊತ್ತಿಕೊಂಡು ಬಂದಿದ್ದಾರೆ. ಅದೇ ಶ್ವಾನದ ಮೂಲಕ ದೇಗುಲದ ಮುಂದಿರೋ ನಂದಿಯ ಪೂಜೆ ಮಾಡಿಸಿದ್ದಾರೆ. ಅಲ್ಲದೇ ಶ್ವಾನದ ಪಾದವನ್ನ ನಂದಿಯನ್ನ ಸ್ಪರ್ಶಿಸಿ, ಕೊನೆಗೆ ಪೂಜಾರಿ ಆ ಶ್ವಾನಕ್ಕೆ ತಿಲಕ ಸಹ ಇಟ್ಟಿದ್ದಾರೆ. ಇದು ಈಗ ಬದರಿನಾಥ-ಕೇದಾರನಾಥ ದೇವಾಲಯ (BKTC)ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಹಿಂದು ಭಕ್ತರು ಇದನ್ನ ಖಂಡಿಸಿದ್ದಾರೆ ಕೂಡ. ಪರಿಣಾಮ ಈಗ ರೋಹನ್ ತ್ಯಾಗಿ ವಿರುದ್ಧ FIR ದಾಖಲಾಗಿದೆ.
‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ
ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಜನರು ನವಾಬ್ ಅನ್ನೊ ನಾಯಿ ಮತ್ತು ಅದರ ಮಾಲೀಕ ರೋಹನ್ ತ್ಯಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಈ ಕ್ರಮ ಪ್ರಪಂಚದಾದ್ಯಂತ ಹಿಂದೂಗಳ ಧಾರ್ಮಿಕ ಭಾವನೆಗಳನ್ನ ಈ ಪೂಜೆಯಿಂದಾಗಿ ಘಾಸಿಯಾಗಿದೆ ಅಂತ ಹೇಳಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಈ ವಿಡಿಯೋವನ್ನ ಇಷ್ಟಪಟ್ಟಿದ್ದಾರೆ. ನವಾಬ್ ಹೆಸರಲ್ಲಿರೋ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ 74 ಸಾವಿರ ಫಾಲೋವರ್ಸ್ ಈ ವಿಡಿಯೋಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ರೋಹನ್ ತ್ಯಾಗಿ ಶ್ವಾನದಿಂದ ಪೂಜೆ ಮಾಡಿಸಿರೋ ಹಿಂದೆ ಯಾವುದೇ ದುರುದ್ದೇಶ ಇಲ್ಲದೇ ಇರಬಹುದು. ಆದರೆ ದೇವರ ಪೂಜೆ ಅಂದರೆ ಮಡಿ-ಮೈಲಿಗೆ ಇರೋದು ಸಹಜ. ಅದರಲ್ಲೂ ಕೇದಾರನಾಥ ಅಂದರೆ ಇದು ಹಿಂದೂ ಭಕ್ತರ ವಿಶೇಷ ಭಕ್ತಿಭಾವ. ಹೀಗಿರುವಾಗ ಶ್ವಾನವೊಂದು ಪೂಜೆ ಮಾಡಿರೋದು ಭಕ್ತರಿಗೆ ಅಸಮಾಧಾನ ಮಾಡಿದೆ ಅಂತ ಕೇದಾರನಾಥ ಭಕ್ತರು ಹೇಳಿಕೊಳ್ಳುತ್ತಿದ್ದಾರೆ.
https://youtu.be/pNdM9CxLsnY