ಉದ್ಯೋಗಿಗಳ ಭವಿಷ್ಯ ನಿಧಿ ಮೊತ್ತವನ್ನು ಠೇವಣಿ ಮಾಡದೇ ಕೋಟ್ಯಂತರ ರೂಪಾಯಿ ವಂಚಿಸಿದ ಕಾರ್ಖಾನೆ ಮಾಲೀಕರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು ನೋಯ್ಡಾದ ಹೊಸೈರಿ ಕಾಂಪ್ಲೆಕ್ಸ್ ನಲ್ಲಿರುವ ರಿಷಭ್ ಸಿಂಘ್ವಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಆತನ ಫ್ಯಾಕ್ಟರಿ ಸಿ-4 ಹೊಸೈರಿ ಕಾಂಪ್ಲೆಕ್ಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಸಿಂಘ್ವಿ ಹೊಸೈರಿ ಕಾಂಪ್ಲೆಕ್ಸ್ ನಲ್ಲಿ ಸಿ-4 ರಿಂದ ಸಿ-11 ವರೆಗಿನ ಕಂಪನಿಯನ್ನು ಹೊಂದಿದ್ದು, ಅದರಲ್ಲಿ 1500-2000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯಲ್ಲಿ ಮುಖ್ಯವಾಗಿ ಕಳೆದ ಹಲವಾರು ದಶಕಗಳಿಂದ ಕಾಗದ ಮತ್ತು ಮುದ್ರಣ ತಯಾರಿಕಾ ವಲಯದಲ್ಲಿ ವ್ಯವಹಾರ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಕಾರ್ಖಾನೆಯ ಮಾಲೀಕರು ತಮ್ಮ ಪಿಎಫ್ ಕಡಿತಗೊಳಿಸಿದ್ದರೂ ಜಮಾ ಮಾಡಿಲ್ಲ ಎಂದು ಉದ್ಯೋಗಿಗಳು ದೂರು ನೀಡಿದ್ದರು. ಕಾರ್ಖಾನೆಯ ಮಾಲೀಕ ಈ ರೀತಿ ಹಲವು ವರ್ಷಗಳಿಂದ ಮಾಡಿದ್ದು ಉದ್ಯೋಗಿಗಳ ಪಿಎಫ್ ಹಣವನ್ನು ಜಮಾ ಮಾಡಿರಲಿಲ್ಲ.
ಆರೋಪಿಯ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಉದ್ಯೋಗದಾತ ಕಂಪನಿ ಪಾಲು ಠೇವಣಿ ಮಾಡಲು ವಿಫಲವಾದರೆ EPF ಖಾತೆಯ ಬಡ್ಡಿಗೆ ಏನಾಗುತ್ತದೆ ?
ಉದ್ಯೋಗದಾತನು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ಇತರ ನಿಬಂಧನೆಗಳ ಕಾಯಿದೆ, 1952 ರ ವಿಭಾಗ 7Q ಗೆ ಅನುಗುಣವಾಗಿ ವರ್ಷಕ್ಕೆ 12% ದರದಲ್ಲಿ ಸರಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
0 – 2 ತಿಂಗಳ ವಿಳಂಬಕ್ಕೆ: ಶೇಕಡಾ 5 (ವಾರ್ಷಿಕ)
2 – 4 ತಿಂಗಳ ವಿಳಂಬಕ್ಕೆ: 10 ಪ್ರತಿಶತ (ವಾರ್ಷಿಕ)
4 – 6 ತಿಂಗಳ ವಿಳಂಬಕ್ಕೆ: 15 ಪ್ರತಿಶತ (ವಾರ್ಷಿಕ)
6 ತಿಂಗಳ ಮೇಲಿನ ವಿಳಂಬಕ್ಕೆ: 25 ಪ್ರತಿಶತ (ವಾರ್ಷಿಕ)