ನೊಯ್ಡಾ: ಸುಮಾರು 20 ವರ್ಷದ ಮನೆಗೆಲಸದ ಮಹಿಳೆಯನ್ನು ಆಕೆಯ ಮಾಲೀಕರು ಥಳಿಸಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯ ಸೆಕ್ಟರ್ 120 ರಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ. ತನ್ನ ಮಗಳನ್ನು ಅವಳು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರಾದ ಶೆಫಾಲಿ ಕೌಲ್ ಥಳಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯನ್ನು 20 ವರ್ಷದ ಅನಿತಾ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಶೆಫಾಲಿ ಅನಿತಾಳನ್ನು ಕೆಲಸ ಮಾಡುವಂತೆ ಒತ್ತಾಯಿಸಿ ಬಲವಂತವಾಗಿ ಎಳೆಯುತ್ತಿರುವುದನ್ನು ನೋಡಲಾಗಿದೆ. ಅನಿತಾ ಲಿಫ್ಟ್ನಿಂದ ಹೊರಬರಲು ನಿರಾಕರಿಸಿದಾಗ, ಮಹಿಳೆ ಹಲ್ಲೆ ಮಾಡಿರುವುದನ್ನು ನೋಡಬಹುದಾಗಿದೆ.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಡಿಸಿಪಿ ಸೆಂಟ್ರಲ್ ಹೇಳಿದ್ದಾರೆ.