
ಗ್ರೇಟರ್ ನೋಯಿಡಾದಲ್ಲಿ ಮೂವರು ಅಂತರಾಷ್ಟ್ರೀಯ ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಅವರ ಬಳಿ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಮೂಲದ ಇಬ್ಬರು ಹಾಗೂ ಘಾನಾ ಮೂಲದ ಓರ್ವ ಬಂಧನಕ್ಕೊಳಗಾದವರಾಗಿದ್ದಾರೆ.
ಇವರುಗಳು ಕ್ಯಾನ್ಸರ್ ಔಷಧಿ ಪಡೆದುಕೊಳ್ಳುವುದಾಗಿ ಹೇಳಿ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅವರಿಗೆ 1.81 ಕೋಟಿ ರೂಪಾಯಿ ವಂಚಿಸಿದ್ದರು. ಈ ಕುರಿತಂತೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 3000 ಅಮೆರಿಕನ್ ಡಾಲರ್, 10,500 ಪೌಂಡ್ ಜೊತೆಗೆ 10.76 ಕೋಟಿ ರೂಪಾಯಿ ಮೌಲ್ಯದ ಭಾರತೀಯ ನಕಲಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ಆರೋಪಿಗಳು ಇತರೆ ಸಹಚರರೊಂದಿಗೆ ಸೇರಿ ಇನ್ನಷ್ಟು ಸೈಬರ್ ವಂಚನೆ ಪ್ರಕರಣದಲ್ಲಿ ಪಾಲ್ಗೊಂಡಿರುವ ಕುರಿತು ತನಿಖೆ ನಡೆಯುತ್ತಿದೆ.