ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 32 ವರ್ಷದ ಮಹಿಳೆ ಫೇಸ್ಬುಕ್ ಗೆಳೆಯನಿಗೆ 32 ಲಕ್ಷ ನೀಡಿ ಮೋಸ ಹೋಗಿದ್ದಾರೆ. ನೋಯ್ಡಾದ ಸೆಕ್ಟರ್ 45ರ ನಿವಾಸಿಯಾಗಿರುವ ಶಿಕ್ಷಕಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
NDTV ವರದಿಯ ಪ್ರಕಾರ, ಫೇಸ್ಬುಕ್ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದ ಮಹಿಳೆಗೆ ಕೆಲವೇ ಸಮಯದಲ್ಲಿ ಅವನೊಂದಿಗೆ ಸ್ನೇಹ ಬೆಳೆದಿತ್ತು. ಕೆಲವು ಚಾಟ್ಗಳ ನಂತರ, ವ್ಯಕ್ತಿ ಮೊದಲು ಅವರ ವಿಳಾಸವನ್ನು ಕೇಳಿದ್ದಾನೆ, ಅದಕ್ಕೆ ಮಹಿಳೆ ನಿರಾಕರಿಸಿದ್ದಾರೆ.
ಆದಾದ, ಕೆಲವು ದಿನಗಳ ನಂತರ, ಇನ್ನೊಬ್ಬ ಮಹಿಳೆಯಿಂದ ಶಿಕ್ಷಕಿಗೆ ದೂರವಾಣಿ ಕರೆ ಬಂದಿದೆ, ಮುಂಬೈನಿಂದ ನಮ್ಮ ಕಛೇರಿಗೆ ಪಾರ್ಸೆಲ್ ಬಂದಿದೆ, ಅದರಲ್ಲಿ ಕೆಲವು ಚಿನ್ನಾಭರಣಗಳು, ಕೈಗಡಿಯಾರಗಳು ಮತ್ತು ಸುಮಾರು 55 ಲಕ್ಷ ನಗದು ಇದೆ, ಪಾರ್ಸೆಲ್ ಕ್ಲಿಯರೆನ್ಸ್ಗಾಗಿ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಿ ಎಂದು ಕರೆ ಮಾಡಿದ್ದ ಮಹಿಳೆ ಕೇಳಿದ್ದಾಳೆ. ಈ ಗಿಫ್ಟ್ ಹಾಗೂ ನಗದನ್ನ ಫೇಸ್ ಬುಕ್ ಗೆಳೆಯನೆ ಕಳಿಸಿರಬಹುದು ಎಂದು ತಿಳಿದ ಶಿಕ್ಷಕಿ ಆರು ಕಂತುಗಳಲ್ಲಿ 32 ಲಕ್ಷ ಹಣ ಪಾವತಿಸಿ ಮೋಸಹೋಗಿದ್ದಾರೆ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ತಿಳಿದು ಬಂದಿದೆ.
BIG NEWS: ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ; ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದೆ ಎಂದ ಸಿದ್ದರಾಮಯ್ಯ
ಮಹಿಳೆಯ ದೂರಿನ ಆಧಾರದ ಮೇಲೆ, ನೋಯ್ಡಾ ಪೊಲೀಸರು ಆರೋಪಿಗಳ ವಿರುದ್ಧ ವಂಚನೆ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಿಜವಾದ ವಂಚಕನ ಗುರುತು ಇನ್ನೂ ತಿಳಿದಿಲ್ಲವಾದ್ದರಿಂದ, ನೋಯ್ಡಾ ಪೊಲೀಸರು ಎಫ್ಐಆರ್ನಲ್ಲಿ ಆರೋಪಿಯನ್ನು “ಆರತಿ” ಎಂದು ಹೆಸರಿಸಿದ್ದಾರೆ. ಏಕೆಂದರೆ ಸಂತ್ರಸ್ತೆ ಈ ಹೆಸರಿನ ಕರೆಯನ್ನು ಸ್ವೀಕರಿಸಿದ್ದಾರೆ. ಈಗಾಗಲೇ ನೋಯ್ಡಾ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.