ಬರ್ಮಾದ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಂಗ್ ಸಾನ್ ಸೂಕಿ ಅವರಿಗೆ ಮಯನ್ಮಾರ್ ನ ಮಿಲಿಟರಿ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತೆಯೂ ಆಗಿರುವ ಆಂಗ್ ಸಾನ್ ಸೂಕಿ ಅವರನ್ನು ಜೀವನಪರ್ಯಂತ ಜೈಲಿನಲ್ಲಿ ಇಡಲು ಸಂಚು ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಹಿಂದೆಯೂ ಆಂಗ್ ಸಾನ್ ಸೂಕಿ ಅವರನ್ನು ಸಾಮಾಜಿಕ ಹೋರಾಟಗಳ ಕಾರಣಕ್ಕೆ ಬಂಧನಕ್ಕೀಡು ಮಾಡಲಾಗಿತ್ತಾದರೂ ಬಳಿಕ ಬಿಡುಗಡೆಗೊಳಿಸಲಾಗಿತ್ತು.