ಚಂಡೀಗಢ: ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.
ಜುಲೈ 31ರಂದು ಹರ್ಯಾಣದ ನೂಹ್ ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಶಾಸಕರನ್ನು ಬಂಧಿಸಲಾಗಿದೆ. ಕೋಮು ಘರ್ಷಣೆಯ ನಂತರ ದಾಖಲಿಸಲಾಗಿದ್ದ ಎಫ್ಐಆರ್ ನಲ್ಲಿ ಫಿರೋಜ್ ಪುರ ಜಿರ್ಕಾ ಕ್ಷೇತ್ರದ ಶಾಸಕ ಮಮ್ಮನ್ ಖಾನ್ ಆರೋಪಿ ಎಂದು ಹೆಸರಿದ್ದ ಕಾರಣಕ್ಕೆ ಅವನ್ನು ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ನೂಹ್ ಹಿಂಸಾಚಾರದ ಬಳಿಕ ದಾಖಲಾದ ಎಫ್ಐಆರ್ ನಲ್ಲಿ ಶಾಸಕರು ಆರೋಪಿ ಎಂದಿದೆ ಎಂದು ಹರ್ಯಾಣ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. ಅಲ್ಲದೇ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ಬಳಿ ಫೋನ್ ಕರೆ, ದಾಖಲೆಗಳ ಪುರಾವೆಗಳು ಇದೆ ಎಂದು ಪೊಲೀಸರು ತಿಳಿಸಿದ್ದರು.
ಜುಲೈ 31ರಂದು ನೂಹ್ ನಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ದಾಳಿ ವೇಳೆ ಆರು ಜನರು ಸಾವನ್ನಪ್ಪಿದ್ದರು. ಘಟನೆ ಹಿಂಸಾಚಾರಕ್ಕೆ ತಿರುಗಿತ್ತು.