ಭಾರತವನ್ನು ಹೊರತುಪಡಿಸಿ ಮಿಕ್ಕ ರಾಷ್ಟ್ರಗಳಲ್ಲಿ ಮಲ, ಮೂತ್ರ ವಿಸರ್ಜನೆ ನಂತರ ಸ್ವಚ್ಛಗೊಳಿಸಲು ಟಾಯ್ಲೆಟ್ ಪೇಪರ್ ಅನ್ನು ಬಳಸುವುದುಂಟು. ಇದೀಗ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಎನ್ನುತ್ತಿದ್ದಾರೆ ಮೂತ್ರಶಾಸ್ತ್ರಜ್ಞರು.
ಹೌದು, ಟಾಯ್ಲೆಟ್ ಪೇಪರ್ ನಿಂದ ಸ್ವಚ್ಛಗೊಳಿಸಿಕೊಳ್ಳುವುದಕ್ಕಿಂತ ನೀರಿನಲ್ಲಿ ತೊಳೆದುಕೊಳ್ಳುವುದು ಉತ್ತಮ. ಇದರಿಂದ ಗುಪ್ತ ಅಂಗಗಳಿಗೆ ತೊಂದರೆಯಾಗುವುದನ್ನು ತಡೆಗಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀರನ್ನು ಬಳಸುವುದರಿಂದ ಗುದದ್ವಾರದಲ್ಲಿ ಉಂಟಾಗುವ ಉರಿ, ಕಿರಿಕಿರಿ ಅನುಭವ, ಊದಿಕೊಳ್ಳುವುದು ಇಂತಹ ಇತರೆ ತೊಂದರೆಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಕ್ಯಾಲಿಫೋರ್ನಿಯಾ ಮೂಲದ ಕೊಲೊರೆಕ್ಟಲ್ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಕ ಡಾ ಅಲೆನ್ ಕಮ್ರಾವಾ.
BREAKING: ‘ಆಯುಷ್ಮಾನ್’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಹೆಚ್ಚುವರಿ ಉನ್ನತ ಚಿಕಿತ್ಸೆಗೆ ‘ರೆಫರಲ್ ವ್ಯವಸ್ಥೆ’ ಜಾರಿ
ಟಾಯ್ಲೆಟ್ ಪೇಪರ್ ಗಳನ್ನು ಬಳಸುವುದರಿಂದ ಗುದದ್ವಾರದ ಸುತ್ತಮುತ್ತಲಿನ ಚರ್ಮಕ್ಕೆ ಹಾನಿಯಾಗಬಹುದು. ಇದು ಗುದದ್ವಾರದ ಸೋಂಕುಗಳು, ಮೂತ್ರ ಸೋಂಕಿನಂತಹ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ತೊಳೆದುಕೊಳ್ಳುವುದು ನಿಸ್ಸಂದೇಹವಾಗಿ ತುಂಬಾ ಒಳ್ಳೆಯ ಅಭ್ಯಾಸ. ಅಲ್ಲದೇ ಮಹಿಳೆಯರಲ್ಲಿ ಯೋನಿ ಮತ್ತು ಯುಟಿಐ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುದು ನ್ಯೂಯಾರ್ಕ್ ನಗರದ ಗುದನಾಳದ ಶಸ್ತ್ರಚಿಕಿತ್ಸಕ ಡಾ. ಇವಾನ್ ಗೋಲ್ಡ್ಸ್ಟೈನ್ ಅವರ ಅಭಿಪ್ರಾಯ.
ಇನ್ನು ಪರಿಸರದ ದೃಷ್ಟಿಕೋನದಿಂದಲೂ ಈ ರೂಢಿ ತುಂಬಾ ಅನುಕೂಲಕರವಾಗಿದೆ. ಸೈಂಟಿಫಿಕ್ ಅಮೇರಿಕನ್ನಲ್ಲಿನ ಲೇಖನವೊಂದರ ಪ್ರಕಾರ ಟಾಯ್ಲೆಟ್ ಪೇಪರ್ನ ಒಂದು ರೋಲ್ ಅನ್ನು ತಯಾರಿಸಲು 140 ಲೀಟರ್ ನೀರು ಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ ಒಮ್ಮೆ ಸುಮಾರು 500 ಮಿಲಿ ನೀರು ಸಾಕಾಗುತ್ತದೆ ಎಂದು ಹೇಳಿದೆ.