alex Certify ಅಚ್ಚರಿಗೊಳಿಸುವಂತಿದೆ ಈ ಪಬ್ ಪ್ರವೇಶಿಸಲು ಇರುವ ನಿಯಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುವಂತಿದೆ ಈ ಪಬ್ ಪ್ರವೇಶಿಸಲು ಇರುವ ನಿಯಮ….!

ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿರುತ್ತದೆ. ಆದರೆ, ಪಬ್ ಒಂದರಲ್ಲಿ ಕಟ್ಟುನಿಟ್ಟಿನ ನಿಯಮ ಇರೋದನ್ನು ಎಲ್ಲಾದ್ರೂ ಕೇಳಿದ್ದೀರಾ..?

ಹೌದು, ಬ್ರಿಟನ್‌ನಲ್ಲಿ ಮುಚ್ಚಲಾಗಿದ್ದ ಪ್ರಖ್ಯಾತ ಪಬ್ ಒಂದನ್ನು ಮತ್ತೆ ತೆರೆಯಲಾಗಿದ್ದು, ಇಲ್ಲಿ ಒಂದು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಹೊಸ ನಿಯಮಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ನಂಬಲಸಾಧ್ಯವಾಗಿದ್ದರೂ, ದಿ ಫಾಕ್ಸ್ ಮತ್ತು ಗೂಸ್ ಪಬ್ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮೊದಲನೆಯದಾಗಿ ಮಕ್ಕಳು ಮತ್ತು ಸೆಲ್ ಫೋನ್‌ಗಳಿಗೆ ನಿಷೇಧ ವಿಧಿಸಿದೆ. ಕೆಲವೊಂದು ಪದಗಳಿಗೂ ನಿಷೇಧ ವಿಧಿಸಲಾಗಿದೆ.

ಬ್ರೆವರಿ ಮಾಲೀಕ ಹಂಫ್ರೆ ಸ್ಮಿತ್ ಅವರು ಅಕ್ಟೋಬರ್ 2019 ರಲ್ಲಿ ದಿ ಫಾಕ್ಸ್ & ಗೂಸ್ ಗೆ ಪ್ರವೇಶಿಸಿದಾಗ ಪೋಷಕರೊಬ್ಬರು ಎಫ್ ಪದವನ್ನು ಹೇಳಿದ್ದನ್ನು ಕೇಳಿ ಶಾಕ್ ಗೆ ಒಳಗಾಗಿದ್ದಾರೆ. ಕೇವಲ ಏಳು ವಾರಗಳಲ್ಲೇ ಅವರು ಜನಪ್ರಿಯ ಬಾರ್ ಅನ್ನು ಮುಚ್ಚಿದ್ರು. ಮೂರು ವರ್ಷಗಳ ಕಾಲ ಅದನ್ನು ತೊರೆದರು.

ಯುಕೆಯಲ್ಲಿ 300 ಪಬ್‌ಗಳನ್ನು ಹೊಂದಿರುವ 76 ವರ್ಷದ ಸ್ಮಿತ್, ಮೂರು ವರ್ಷಗಳ ನಂತರ ವೋರ್ಸೆಸ್ಟರ್‌ಶೈರ್‌ನ ಡ್ರಾಯಿಟ್‌ವಿಚ್‌ನಲ್ಲಿ ದಿ ಫಾಕ್ಸ್ & ಗೂಸ್ ಅನ್ನು ಪುನಃ ತೆರೆಯಲು ನಿರ್ಧರಿಸಿದ್ದಾರೆ. ಗ್ರಾಹಕರು ಯಾವುದೇ ಅಶ್ಲೀಲತೆಯ ಪದಗಳನ್ನು ಬಳಸಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಹೀಗೆ ಮಾಡಿದ್ದಲ್ಲಿ ಅಂಥವರು ಕೂಡಲೇ ಆ ಸ್ಥಳದಿಂದ ಹೊರಡಬೇಕಾಗುತ್ತದೆ.

ಫೋನ್ ನಲ್ಲಿ ಕರೆಗಳನ್ನು ಮಾಡುವ ಅಥವಾ ಸ್ವೀಕರಿಸುವ ವ್ಯಕ್ತಿಗಳು ಹೊರಗೆ ಹೋಗಿ ಮಾತನಾಡಿ ಬರಬೇಕು. ಪಬ್ ನ ಒಳಗೆ ಮಾತನಾಡುವಂತಿಲ್ಲ. ಹಾಗೆಯೇ ಗೂಗಲ್ ಹುಡುಕಾಟವನ್ನು ನಡೆಸುವುದು ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನೂ ಸಹ ಬಳಸುವಂತಿಲ್ಲ. ಜೊತಗೆ ಮಕ್ಕಳನ್ನೂ ಪಬ್‌ನೊಳಗೆ ಅನುಮತಿಸಲಾಗುವುದಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...