ಚಂಡಿಗಢ: ಕೊರೋನಾ ಲಸಿಕೆ ಹಾಕಿಸಿಕೊಂಡ ನೌಕರರಿಗೆ ಮಾತ್ರ ವೇತನ ನೀಡುವ ಕುರಿತಂತೆ ಪಂಜಾಬ್ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.
ವ್ಯಾಕ್ಸಿನ್ ಪಡೆದಿದ್ದರೆ ಮಾತ್ರ ಸರ್ಕಾರಿ ನೌಕರರಿಗೆ ವೇತನ ನೀಡಲಾಗುವುದು. ಈ ಬಗ್ಗೆ ಪಂಜಾಬ್ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಿದ್ದು, ಲಸಿಕೆ ಪಡೆದುಕೊಂಡ ದಾಖಲೆಯನ್ನು ನೌಕರರು ಅಪ್ಲೋಡ್ ಮಾಡಬೇಕಿದೆ. ಕನಿಷ್ಠ ಒಂದು ಡೋಸ್ ಆದರೂ ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಎಂದು ಹೇಳಲಾಗಿದೆ.
ಪಂಜಾಬ್ ಸರ್ಕಾರದ ಉದ್ಯೋಗ ಪೋರ್ಟಲ್‌ನಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಆದಾಗ್ಯೂ, ಲಸಿಕೆ ಹಾಕದ ನೌಕರರ ಬಗ್ಗೆ ಏನು ಮಾಡಲು ಉದ್ದೇಶಿಸಿದೆ ಎಂಬುದನ್ನು ಸರ್ಕಾರದ ಆದೇಶವು ಉಲ್ಲೇಖಿಸಿಲ್ಲ.