ಟಿಕೆಟ್ ರಹಿತ ಪ್ರಯಾಣಿಕರು ರೈಲಿನ ಎಸಿ ಕೋಚ್‌ಗಳನ್ನು ಪ್ರವೇಶಿಸಿ ಪ್ರಯಾಣ ಮಾಡುವ ಅಸಮಾಧಾನದ ನಡುವೆ ರೈಲ್ವೆ ಇಲಾಖೆಯ ಅಸಮರ್ಥತೆ ಬಗ್ಗೆ ಮತ್ತೊಂದು ಕೂಗು ಕೇಳಿಬಂದಿದೆ. ದೆಹಲಿ-ಸಾರಾಯ್ ರೋಹಿಲ್ಲಾ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣಿಸುವವರು ಮೊದಲ ಎಸಿ ಕ್ಯಾಬಿನ್‌ನ ಹೊರಗೆ ಜಾಗವನ್ನು ಆಕ್ರಮಿಸಿಕೊಂಡಿರುವ ಫೋಟೋ ಪೋಸ್ಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
“ರೈಲು ಸಂಖ್ಯೆ 22949 ದೆಹಲಿ ಸರಿಯಾ ರೋಹಿಲ್ಲಾ ರೈಲಿನ ಮೊದಲ ಎಸಿಯಲ್ಲಿ ಭಯಾನಕತೆ ಮುಂದುವರೆದಿದೆ. ನಾನು ಎಚ್ಚರಗೊಂಡು ವಾಶ್‌ರೂಮ್ ಬಳಸಲು ಹೋದಾಗ ನನ್ನ ಕ್ಯಾಬಿನ್‌ನ ಹೊರಗೆ ಕೂತಿದ್ದ ಈ ಮಹಿಳೆಯರನ್ನು ದಾಟಿ ಹೋಗಲು ಸಾಧ್ಯವಾಗಲಿಲ್ಲ. ನಾನು ಪರಿಚಾರಕನನ್ನು ಕೇಳಿದಾಗ, ಆತ ಇದು ಹೀಗೇ…….. ಯಾರೂ ಏನನ್ನೂ ಮಾಡುವುದಿಲ್ಲ ಎಂದ” ಎಂದು ಪ್ರಯಾಣಿಕ ಕುಶಾಲ್ ಮೆಹ್ರಾ ಟ್ವಿಟರ್ ನಲ್ಲಿ ಬರೆದಿದ್ದಾರೆ,
ಮೆಹ್ರಾ ಅವರು ತಮ್ಮ ಪೋಸ್ಟ್ ಗಳಲ್ಲಿ ರೈಲ್ವೆ ಸಚಿವಾಲಯದ ಅಧಿಕೃತ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ ನಂತರ ಹೊರಗೆ ಕುಳಿತಿದ್ದವರನ್ನು ತೆರವುಗೊಳಿಸಲಾಗಿದೆ ಎಂದು ಮತ್ತೊಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು “ಸರ್ಕಾರವು ವಂದೇ ಭಾರತ್ ಮೇಲೆ ಮಾತ್ರ ಗಮನಹರಿಸುತ್ತಿದೆ, ಅದಕ್ಕಾಗಿಯೇ ಈ ಹಳೆಯ ರೈಲು ಪ್ರಯಾಣಿಕರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.