ಒಂಭತ್ತರಿಂದ 12ನೇ ತರಗತಿ ವಿದ್ಯಾರ್ಥಿಗಳ 2021-2022ರ ಪಠ್ಯಕ್ರಮವನ್ನು ಸಿ ಬಿಎಸ್ ಇ ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ವರ್ಷ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿತ್ತು. ಆದ್ರೆ ಮುಂದಿನ ವರ್ಷ ಯಾವುದೇ ರಿಯಾಯಿತಿ ಸಿಗುವುದಿಲ್ಲ.
ಕಳೆದ ವರ್ಷ ತೆಗೆದುಹಾಕಲಾದ ಅಧ್ಯಾಯಗಳನ್ನು ಮತ್ತೆ ನೀಡಲಾಗಿದೆ. ಮುಂದಿನ ವರ್ಷ ಸಂಪೂರ್ಣ ಪಠ್ಯಕ್ರಮದ ಆಧಾರದ ಮೇಲೆ ಪರೀಕ್ಷೆಗಳು ನಡೆಯಲಿವೆ. ಕೊರೊನಾ ಕಾರಣಕ್ಕೆ 2021 ಪರೀಕ್ಷೆಗಳಿಗೆ ಸಿಬಿಎಸ್ಇ ಪಠ್ಯಕ್ರಮವನ್ನು ಶೇಕಡಾ 30ಕ್ಕೆ ಸೀಮಿತಗೊಳಿಸಲಾಗಿತ್ತು.
ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಸ್ಕೂಲ್ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ನಿಗಧಿಯಂತೆ 2021ರ ಮೇ-ಜೂನ್ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಸೀಮಿತಗೊಂಡ ಪಠ್ಯಕ್ರಮದಲ್ಲಿಯೇ ಪರೀಕ್ಷೆ ನಡೆಯಲಿದೆ. ಹಿಂದಿನ ಜುಲೈನಲ್ಲಿಯೇ ಎನ್‌ಸಿಇಆರ್‌ಟಿ ಸಿದ್ಧಪಡಿಸಿದ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನುಸರಿಸಲು ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ ನೀಡಿತ್ತು.