alex Certify ʼರಿಯಲ್ ಎಸ್ಟೇಟ್ ಅಥವಾ ರಾಜಕೀಯ ಚರ್ಚೆ ಬೇಡ’: ಬೆಂಗಳೂರು ರೆಸ್ಟೋರೆಂಟ್ ಬೋರ್ಡ್ ʼವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಿಯಲ್ ಎಸ್ಟೇಟ್ ಅಥವಾ ರಾಜಕೀಯ ಚರ್ಚೆ ಬೇಡ’: ಬೆಂಗಳೂರು ರೆಸ್ಟೋರೆಂಟ್ ಬೋರ್ಡ್ ʼವೈರಲ್ʼ

ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಅಳವಡಿಸಲಾಗಿರುವ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿಗೆ ಬರುವ ಗ್ರಾಹಕರು ರಿಯಲ್ ಎಸ್ಟೇಟ್ ಅಥವಾ ರಾಜಕೀಯ ಚರ್ಚೆಗಳಲ್ಲಿ ತೊಡಗಬಾರದೆಂದು ಬೋರ್ಡ್‌ನಲ್ಲಿ ಸೂಚಿಸಲಾಗಿದೆ.

ದಕ್ಷಿಣ ಬೆಂಗಳೂರಿನ ರೆಸ್ಟೋರೆಂಟ್‌ನ ಗೋಡೆಯ ಮೇಲೆ ಅಂಟಿಸಲಾದ ಬೋರ್ಡ್‌ನ ಫೋಟೋವನ್ನು X ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅದರಲ್ಲಿ, “ಇಲ್ಲಿನ ಪೀಠೋಪಕರಣಗಳು ಊಟೋಪಚಾರಕ್ಕೆ ಮಾತ್ರ, ಭೂ ವ್ಯವಹಾರ, ರಾಜಕೀಯ ನಿಷ್ಕರ್ಷೆಗಳಿಗೆ ಅಲ್ಲ. ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ” ಎಂದು ಬರೆಯಲಾಗಿದೆ.

ಬೆಂಗಳೂರಿನ ಅನೇಕ ಉಪಹಾರ ಗೃಹಗಳಲ್ಲಿ ಜನರು ಗುಂಪುಗೂಡಿ ಆಸ್ತಿ-ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಾ, ರಿಯಲ್ ಎಸ್ಟೇಟ್ ಬಗ್ಗೆ ಚರ್ಚಿಸುವುದು ಸಾಮಾನ್ಯ ದೃಶ್ಯವಾಗಿದೆ. ಹೀಗಾಗಿ ಈ ರೀತಿ ಬರೆದಿರುವುದು ಸರಿ ಎಂದು ಬಹುತೇಕರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...