
ಜಿಲ್ಲಾಡಳಿತ ಹಾಗೂ ಉಪ ಪೊಲೀಸ್ ಆಯುಕ್ತರು ಗಣೇಶನ ವಿಗ್ರಹಗಳನ್ನು ಟೆಂಟ್ ಇಲ್ಲವೇ ಪೆಂಡಾಲ್ಗಳನ್ನು ಹಾಕಿ ಪ್ರತಿಷ್ಠಾಪನೆ ಮಾಡದಂತೆ ನೋಡಿಕೊಳ್ಳಲಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಜನಸಂದಣಿ ಸೇರುವಂತಿಲ್ಲ ಎಂದು ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಜನತೆ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವಂತೆ ಡಿಡಿಎಂಎ ಸಲಹೆ ನೀಡಿದೆ.
ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ದೇಶದಲ್ಲಿ ಗಣೇಶ ಚತುರ್ಥಿ ಆಚರಣೆ ವಿಚಾರವಾಗಿ ಸಾಕಷ್ಟು ಪರ – ವಿರೋಧದ ಚರ್ಚೆಗಳು ಉಂಟಾಗಿತ್ತು. ಈ ನಡುವೆ ದೆಹಲಿ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ಆಚರಣೆಗೆ ಬ್ರೇಕ್ ಹಾಕಿದಂತಾಗಿದೆ.