ಕೋವಿಡ್ ಲಸಿಕೆ ಪಡೆಯಲು ಎಲ್ಲಡೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಲು ವಿಶೇಷವಾದ ವ್ಯಾಕ್ಸಿನ್ ಪಾಸ್‌ಪೋರ್ಟ್ ಪರಿಚಯಿಸುವ ಯಾವುದೇ ಯೋಜನೆ ಭಾರತಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಗೆ ತಿಳಿಸಿದ್ದಾರೆ.
“ವ್ಯಾಕ್ಸಿನ್ ಪಾಸ್‌ಪೋರ್ಟ್ ಪರಿಚಯಿಸುವ ಯಾವುದೇ ಪ್ಲಾನ್ ಇಲ್ಲ. ಸದ್ಯಕ್ಕೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಓ) ಅಡಿ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳ ಸಂಬಂಧ ಬಹುರಾಷ್ಟ್ರಗಳ ಮಟ್ಟದಲ್ಲಿ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ನಿರ್ಣಯಕ್ಕೆ ಬರಲಾಗಿಲ್ಲ,” ಎಂದು ಮುರಳೀಧರ್ ತಿಳಿಸಿದ್ದಾರೆ.
ಹಾಗೆಯೇ ಇದೆ ಯಾವುದೇ ವಾರಸುದಾರರಿಲ್ಲದ ಬರೋಬ್ಬರಿ 50 ಸಾವಿರ ಕೋಟಿ ರೂ.
“ಭಾರತವು ಸದ್ಯದ ಮಟ್ಟಿಗೆ ಸ್ವದೇಶೀ ನಿರ್ಮಿತ ಲಸಿಕೆಗಳಿಗೆ ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಮಾನ್ಯತೆ ಸಿಗುವ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಭಾಗಿಯಾಗಿದೆ. ಲಸಿಕೆ ಪ್ರಮಾಣ ಪತ್ರಗಳ ಪರಸ್ಪರ ಮಾನ್ಯೀಕರಣದ ಸಂಬಂಧ ವಿವಿಧ ದೇಶಗಳೊಂದಿಗೆ ಭಾರತ ಮಾತುಕತೆಯಲ್ಲಿ ನಿರತವಾಗಿದೆ,” ಎಂದು ಮುರಳೀಧರನ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಪಡೆದ ಮಂದಿಗೆ ಕೋವಿಡ್ ಪ್ರಮಾಣಪತ್ರಗಳನ್ನು ಕೊಡುತ್ತಿರುವ ಭಾರತ, ಈ ಪ್ರಮಾಣಪತ್ರಕ್ಕೆ ಐರೋಪ್ಯ ಒಕ್ಕೂಟ ಸೇರಿದಂತೆ ಜಾಗತಿಕ ಬಣಗಳು ಮನ್ನಣೆ ಕೊಡಲಿವೆ ಎಂದು ನಂಬಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಈ ಮುನ್ನ ತಿಳಿಸಿದ್ದರು.