ವಿಧಾನ ಸಭಾ ಚುನಾವಣೆಗಳನ್ನು ಎದುರು ನೋಡುತ್ತಿರುವ ದೇಶದ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿರುವ ಕಾರಣ, ಈ ಅವಧಿಯಲ್ಲಿ ವಿತರಿಸಲಾಗುವ ಕೋವಿಡ್ ಲಸಿಕಾ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಇರುವುದಿಲ್ಲ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಕೋ-ವಿಡ್ ಪ್ಲಾಟ್‌ಫಾರಂಗೆ ಅಗತ್ಯವಾದ ಫಿಲ್ಟರ್‌ಗಳನ್ನು ಅಳವಡಿಸಿದ್ದು, ಪ್ರಧಾನಿಯ ಚಿತ್ರಗಳನ್ನು ಲಸಿಕಾ ಪ್ರಮಾಣ ಪತ್ರಗಳಿಂದ ತೆಗೆದು ಹಾಕಲಿದೆ.
ಕಾರ್ಡಿಯೋ ವರ್ಕೌಟ್‌ಗೆ ನೃತ್ಯ ಮಾಡುತ್ತಾ ವಿಡಿಯೋ ಶೇರ್ ಮಾಡಿದ ಸುಶ್ಮಿತಾ ಸೇನ್
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಫೆಬ್ರವರಿ 10ರಿಂದ ಮಾರ್ಚ್ 7ರ ನಡುವೆ ಏಳು ಹಂತಗಳಲ್ಲಿ ವಿಧಾನ ಸಭಾ ಚುನಾವಣೆಗಳು ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ಇರಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಚುನಾವಣಾ ದಿನಾಂಕಗಳ ಘೋಷಣೆ ಕಾರಣದಿಂದ ಚುನಾವಣಾ ನೀತಿ ಸಂಹಿತೆಯು ಮೇಲ್ಕಂಡ ರಾಜ್ಯಗಳಲ್ಲಿ ಪ್ರಭಾವಕ್ಕೆ ಬಂದಿದೆ.