ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಭರ್ತಿ ಮಾಡಿಸುವ ವೇಳೆ ಬಂಕ್ ಗಳಲ್ಲಿ ಮಾಲಿನ್ಯ ನಿಯಂತ್ರಣ(ಪಿಯುಸಿ) ಪ್ರಮಾಣಪತ್ರ ಹಾಜರುಪಡಿಸುವುದನ್ನು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ.
ಅಕ್ಟೋಬರ್ 25 ರಿಂದ ರಾಷ್ಟ್ರ ರಾಜಧಾನಿಯ ಪೆಟ್ರೋಲ್ ಪಂಪ್ ಗಳಲ್ಲಿ ಮಾಲಿನ್ಯ ನಿಯಂತ್ರಣ(ಪಿಯುಸಿ) ಪ್ರಮಾಣಪತ್ರವಿಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಗೋಪಾಲ್ ರೈ ಶನಿವಾರ ಹೇಳಿದ್ದು, ಈ ಸಂಬಂಧ ಶೀಘ್ರ ಅಧಿಸೂಚನೆಯನ್ನೂ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಅಕ್ಟೋಬರ್ 6 ರಿಂದ ದೆಹಲಿಯಲ್ಲಿ ಧೂಳು ವಿರೋಧಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಧೂಳಿನ ಮಾಲಿನ್ಯವನ್ನು ಪರಿಶೀಲಿಸಲು ನಿರ್ಮಾಣ ಸ್ಥಳಗಳಲ್ಲಿ ಹಠಾತ್ ತಪಾಸಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.