ಬೆಂಗಳೂರು: ಬೆಂಗಳೂರಿನಲ್ಲಿ ಮನೆ ಹುಡುಕುವುದು, ಮನೆ ಹುಡುಕಲು ಬಂದವರಿಗೆ ಸುಲಭದಲ್ಲಿ ಬಾಡಿಗೆಗೆ ನೀಡುವುದು ಎರಡೂ ಸುಲಭದ ಮಾತಲ್ಲ. ನೂರೆಂಟು ಪ್ರಶ್ನೆಗಳು ಕೇಳಬೇಕಾಗುತ್ತದೆ.
ಅಂಥದ್ದೇ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವ ರಚಿತಾ ಎನ್ನುವವರು. ಒಂದು ಕಡೆ ಮನೆ ಹುಡುಕಲು ಹೋದಾಗ ನೀವು ಮದುವೆಯಾಗಿದ್ದೀರಾ, ನೀವು ಪಾರ್ಟಿ ಮಾಡುತ್ತೀರಾ? ನಿಮಗೆ ಬಾಯ್ಫ್ರೆಂಡ್ ಇದ್ದಾರಾ? ಅವರು ಮನೆಗೆ ಬರುತ್ತಾರಾ? ಇಂಥ ವೈಯಕ್ತಿಕ ಪ್ರಶ್ನೆಗಳನ್ನು ಬ್ರೋಕರ್ಗಳು ಕೇಳುತ್ತಾರೆ ಎಂದು ಅವರು ಬೇಸರದಿಂದ ನುಡಿದಿದ್ದಾರೆ.
ಒಂದು ಸ್ಕ್ರೀನ್ಷಾಟ್ ಶೇರ್ ಮಾಡಿಕೊಂಡಿರುವ ಅವರು, ಮನೆ ಮಾಲೀಕರೊಬ್ಬರು ಬಾಯ್ಫ್ರೆಂಡ್ ಇಲ್ಲದ, ಪಾರ್ಟಿ ಮಾಡದಿದ್ದರೆ ಮಾತ್ರ ಮನೆ ನೀಡುವುದಾಗಿ ಹೇಳಿದ್ದನ್ನು ತಿಳಿಸಿದ್ದಾರೆ.
ಇದರಿಂದ ಸಿಟ್ಟುಕೊಂಡಿರುವ ರಚಿತಾ ಅವರು, ಇನ್ನು ಮುಂದೆ ನಾನು ಮದುವೆಯಾದ ಮಹಿಳೆಯಂತೆ ವೇಷಧರಿಸಿ ಮನೆ ಹುಡುಕಲು ಹೋಗಬೇಕೆಂದುಕೊಂಡಿದ್ದೇನೆ. ಆಗ ನನ್ನ ಗಂಡ ದೆವ್ವದಂತೆ ನನ್ನನ್ನು ಹಿಂಬಾಲಿಸಿ ಇವಳಿಗೆ ಬಾಯ್ಫ್ರೆಂಡ್ ಇಲ್ಲ, ಪಾರ್ಟಿ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತಾ ನನ್ನೊಂದಿಗೆ ಸುತ್ತಾಡುತ್ತಿರುತ್ತಾನೆ ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಹಲವರು ತಮ್ಮದೇ ಕಥೆ-ವ್ಯಥೆ ಹೇಳಿಕೊಂಡಿದ್ದಾರೆ. ಬಾಡಿಗೆ ಹುಡುಕಲು ಹೋದ ಸಂದರ್ಭಗಳಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಮನೆಯ ಮಾಲೀಕರು ಕೂಡ ಪ್ರತಿಕ್ರಿಯೆ ನೀಡಿದ್ದು, ಹೀಗೆ ವಿಚಾರಿಸದೇ ಹೋದಲ್ಲಿ ಮುಂದೆ ತಮಗಾಗುವ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ.
https://twitter.com/rohshah07/status/1596871548564299776?ref_src=twsrc%5Etfw%7Ctwcamp%5Etweetembed%7Ctwterm%5E1596904272033067008%7Ctwgr%5E4f6aa7d003db70c82e3a65ce6d929b20966ba08b%7Ctwcon%5Es2_&ref_url=https%3A%2F%2Fwww.news18.com%2Fbuzz%2Fno-parties-or-male-friends-bengaluru-woman-looking-for-flat-shares-ordeal-on-twitter-6486541.html