ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಪ್ರಸ್ತುತ ಲಂಡನ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಹಾರ ಮಾಡುತ್ತಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ಆಗಾಗ್ಗ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಾಜಕುಮಾರ ಲಂಡನ್ ನಲ್ಲಿ ತನ್ನ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ.
ಹೌದು, ರಾಜಕುಮಾರ ಲಂಡನ್‌ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಜೀವನ ಮಾಡುತ್ತಿದ್ದಾರೆ. ಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಗಮನಿಸಿದಾಗ ಲಂಡನ್ ಅಂಡರ್‌ಗ್ರೌಂಡ್ ಮೆಟ್ರೋದಂತೆಯೇ ಕಾಣಿಸುತ್ತದೆ. ಈ ವ್ಯವಸ್ಥೆಯು ಗ್ರೇಟರ್ ಲಂಡನ್ ಮತ್ತು ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್, ಎಸೆಕ್ಸ್ ಮತ್ತು ಹರ್ಟ್‌ಫೋರ್ಡ್‌ಶೈರ್‌ನ ಪಕ್ಕದ ಕೌಂಟಿಗಳ ಕೆಲವು ಭಾಗಗಳಿಗೆ ಸೇವೆ ಸಲ್ಲಿಸುತ್ತದೆ.
ಫಜ್ ಸೆಲ್ಫಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಲಂಡನ್ ಟ್ಯೂಬ್‌ನಲ್ಲಿ ಪ್ರಯಾಣಿಸುತ್ತಿರುವ ಬದ್ರ್ ಅತೀಜ್ ಎಂದು ಗುರುತಿಸಲ್ಪಟ್ಟಿರುವ ರಾಜಕುಮಾರ ಮತ್ತು ಅವರ ಸ್ನೇಹಿತನನ್ನು ಒಳಗೊಂಡಿದೆ. ದುಬೈ ಕ್ರೌನ್ ಪ್ರಿನ್ಸ್ ಐಶಾರಾಮಿ ವಾಹನದಲ್ಲಿ ಪ್ರಯಾಣಿಸದೆ ಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ರು. ಇದು ಆನ್‌ಲೈನ್‌ನಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು 2008 ರಿಂದ ದುಬೈನ ಕ್ರೌನ್ ಪ್ರಿನ್ಸ್ ಆಗಿದ್ದಾರೆ.