ಬೆಂಗಳೂರು : ಕರ್ನಾಟಕಕ್ಕೆ ಅಕ್ಕಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹತ್ತಿರ ಯಾರೂ ಬೇಡಿಕೆ ಇಟ್ಟಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP state president Nalin Kumar Kateel) ಹೇಳಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ವರ್ ಹ್ಯಾಕ್ ಮಾಡುವಂತ ಕೆಲಸ ಕೇಂದ್ರ ಸರ್ಕಾರ ಮಾಡಲ್ಲ. ಇದು ಕಾಂಗ್ರೆಸ್ ನ ವೈಫಲ್ಯ, ಬಿಟ್ಟಿ ಭಾಗ್ಯ ಘೋಷಿಸಿ ಅದನ್ನು ಕೊಡಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಾಣಾಳಿಕೆಯಲ್ಲಿ 10 ಕೆಜಿ ಉಚಿತ ಅಕ್ಕಿ ಕೊಡ್ತೀವಿ ಅಂಥಾ ಹೇಳಿದ್ದು ಕಾಂಗ್ರೆಸ್, 10 ಕೆಜಿ ಅಕ್ಕಿ ಕೊಡಲು ವಿಫಲವಾಗಿದೆ.ಕೇಂದ್ರ ಕೊಟ್ರೆ ಮಾತ್ರ ಕೊಡ್ತೀವಿ ಅಂತಾ ಹೇಳಿದ್ರಾ?2 ಲಕ್ಷ ಟನ್ ಅಕ್ಕಿಗೆ ಪ್ರಧಾನಿ ಮೋದಿ ಹತ್ತಿರ ಯಾರೂ ಬೇಡಿಕೆ ಇಟ್ಟಿಲ್ಲ.ಕಾಂಗ್ರೆಸ್ ಗೆ ನೈತಿಕತೆ ಇದ್ರೆ 10 ಕೆಜಿ ಅಕ್ಕಿ ಕೊಡಬೇಕು ಎಂದು ಹೇಳಿದರು.