ಅಫ್ಘಾನಿಸ್ತಾನದಲ್ಲಿ ನರಕ ಸೃಷ್ಟಿಸುತ್ತಿರುವ ತಾಲಿಬಾನಿ ಪಡೆಗಳಿಗೆ ಹೆದರಿ ದೇಶ ಬಿಟ್ಟು ಪಲಾಯನಗೈಯ್ಯುತ್ತಿರುವ ಸಾವಿರಾರು ಅಫ್ಘನ್ನರ ಮನಕಲಕುವ ವಿಡಿಯೋಗಳು ಜಗತ್ತಿನಾದ್ಯಂತ ವ್ಯಾಪಿಸಿವೆ.
ರಕ್ತ ಹಾಗೂ ಕಣ್ಣೀರಿನ ಕೋಡಿಯ ನಡುವೆ ಅಲ್ಲಿನ ಪರಿಸ್ಥಿಯ ಕುರಿತು ಮಾತನಾಡಿದ ಬಾಲಕಿಯೊಬ್ಬಳು, “ನಾವು ಅಫ್ಘಾನಿಸ್ತಾನದಲ್ಲಿ ಹುಟ್ಟಿದ ಕಾರಣಕ್ಕೆ ಲೆಕ್ಕಕ್ಕೆ ಬರುವುದಿಲ್ಲ. ಈ ವಿಡಿಯೋ ಮಾಡಲು ನನ್ನ ಕಣ್ಣೀರನ್ನು ನಾನೇ ಒರೆಸಬೇಕು. ನಮ್ಮನ್ನು ಯಾರೂ ಕೇರ್ ಮಾಡುವುದಿಲ್ಲ. ನಾವೆಲ್ಲಾ ನಿಧಾನವಾಗಿ ಸತ್ತು ಇತಿಹಾಸ ಸೇರುತ್ತೇವೆ. ಇದು ಫನ್ನಿ ಅನಿಸುತ್ತಿದೆಯೇ?” ಎಂದು ಕಣ್ಣೀರಿಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಿಕಿನಿ ಫೋಟೋ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ಮೌನಿ ರಾಯ್
ಟ್ವಿಟರ್‌ನಲ್ಲಿ 2 ದಶಲಕ್ಷ ವೀವ್ಸ್ ಪಡೆದಿರುವ ಈ ವಿಡಿಯೋವನ್ನು ಕಂಡ ನೆಟ್ಟಿಗರು ಅಸಹಾಯಕತೆಯಿಂದ ರೋಧಿಸುವಂತಾಗಿದೆ. ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಿಹೋದ ಬಳಿಕ ಅಫ್ಘಾನಿಸ್ತಾನದ ಚುನಾಯಿತ ಸರ್ಕಾರ ಪತನಗೊಂಡಿದೆ. ಕಾಬೂಲ್ ಹಾಗೂ ಅಧ್ಯಕ್ಷೀಯ ಅರಮನೆಯನ್ನು ಹಿಡಿತಕ್ಕೆ ಪಡೆದಿರುವ ತಾಲಿಬಾನ್, ಅಫ್ಘಾನಿಸ್ತಾನಾದ್ಯಂತ ವಿಜಯ ಘೋಷಿಸಿದೆ. ವರ್ಷದಾರಂಭದಿಂದಲೂ ನಾಲ್ಕು ಲಕ್ಷದಷ್ಟು ಅಫ್ಘನ್ನರನ್ನು ಅನ್ಯ ದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.