ಬೆಂಗಳೂರು : ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಹೊಸದಾಗಿ ಲೈಸೆನ್ಸ್ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಖಾಸಗಿ ಚಾನೆಲ್ ವೊಂದರಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯುವದಕ್ಕೆ ಹಾಗೂ ಲೈಸೆನ್ಸ್ ನೀಡುವುದಕ್ಕೆ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಲೈಸೆನ್ಸ್ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಖಡಕ್ ಆಗಿ ಹೇಳಿದ್ದಾರೆ. ಸಣ್ಣ ಗ್ರಾಮ ಪಂಚಾಯಿತಿಗಳು, ನಗರಗಳಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಸೂಪರ್ ಮಾರ್ಕೆಟ್ ನಲ್ಲೂ ಮದ್ಯ ಮಾರಾಟ
ರಾಜ್ಯದಲ್ಲಿ ಇನ್ನಷ್ಟು ಮದ್ಯದ ಅಂಗಡಿ ಲೈಸೆನ್ಸ್ ನೀಡಲು ಸರ್ಕಾರ ಮುಂದಾಗಿದೆ. ಮೂರು ಸಾವಿರ ಜನರು ಇರುವ ಗ್ರಾಮಗಳು, ಸೂಪರ್ ಮಾರ್ಕೆಟ್ ನಲ್ಲಿ ಮದ್ಯ ಮಾರಾಟ ಮನೆಗೆ ಮಳಿಗೆ ತೆರೆಯಲು ಸಿದ್ದತೆ ನಡೆಸಿದೆ.
ಹೌದು. ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ವಿತರಣೆಗೆ ಅಬಕಾರಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿದ್ದು, 389 ಎಂಎಸ್ಎಎಲ್ ಮದ್ಯ ಮಾರಾಟ ಮಳಿಗೆ ಆರಂಭಿಸಲಾಗುವುದು. ಮೂರು ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೊಸ ಮದ್ಯ ಮಾರಾಟ ಮಳಿಗೆ ತೆರೆಯಲಾಗುವುದು. ಸೂಪರ್ ಮಾರ್ಕೆಟ್ ಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಅಬಕಾರಿ ಇಲಾಖೆ ಸಂಪನ್ಮೂಲ ಹೆಚ್ಚಳಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಶೇಕಡ 25ರಷ್ಟು ಹೆಚ್ಚು ಶುಲ್ಕ ಪಾವತಿಸಿ ಬೇನಾಮಿ ಅಂಗಡಿಗಳನ್ನು ಸಕ್ರಮ ಮಾಡಿಕೊಳ್ಳಬಹುದು. ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಕೂಡ ಇದೆ. ರಾಜ್ಯದಲ್ಲಿ 12,593 ಮದ್ಯದ ಅಂಗಡಿಗಳಿದ್ದು, ಮತ್ತೆ 389 ಮದ್ಯದಂಗಡಿ ತೆರೆಯಲು ತೀರ್ಮಾನಿಸಲಾಗಿದೆ.