ಆಧುನಿಕ ಯುಗದಲ್ಲಿ ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತಿರುತ್ತದೆ. ಬದಲಾಗಿರುವ ಆಹಾರ ಪದ್ಧತಿಯೂ ಅದಕ್ಕೊಂದು ಕಾರಣವಿರಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ, ಅನೇಕ ರೋಗಗಳ ಕಾರಣಕ್ಕೆ ಹೆಚ್ಚು ಮಾತ್ರೆಗಳನ್ನು ಸೇವಿಸುವವರಿಗೂ ಮಲಬದ್ಧತೆ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೆ ಕೆಲವು ಮನೆ ಮದ್ದುಗಳಿವೆ.
ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಎರಡರಿಂದ ಮೂರು ಲೋಟ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ.
ಜಂಕ್ ಫುಡ್ ಹಾಗೂ ಹೆಚ್ಚಿನ ಮಸಾಲೆ ಭರಿತ ಆಹಾರಗಳ ಸೇವನೆ ಇತಿಮಿತಿಯಲ್ಲಿರಲಿ. ನಿತ್ಯ ಇವುಗಳನ್ನೇ ಸೇವಿಸಿದರೂ ಮಲಬದ್ಧತೆ ಕಾಡಬಹುದು. ಹಾಗಾಗಿ ವಾರಕ್ಕೊಮ್ಮೆ ಮಾತ್ರ ಹೊರಗಿನ ಆಹಾರ ಸೇವನೆಗೆಂದು ಮೀಸಲಿಡಿ.
ತಾಜಾ ಹಸಿರು ತರಕಾರಿ, ಸೊಪ್ಪುಗಳನ್ನು ವಾರದಲ್ಲಿ ಮೂರು ಬಾರಿಯಾದರೂ ಸೇವಿಸಿ. ಬಾಳೆಹಣ್ಣು, ಸೇಬು, ಕಿತ್ತಳೆಗಳು ನಿಮ್ಮ ಊಟದ ಮೆನುವಿನಲ್ಲಿರಲಿ. ಪದೇ ಪದೇ ಮಲಬದ್ಧತೆ ಕಾಡುತ್ತಿದ್ದರೆ ಚಪಾತಿ ಸೇವನೆಯಿಂದ ದೂರವಿರಿ. ಮತ್ತು ದಿನವಿಡೀ ನೀರು ಕುಡಿಯುತ್ತಿರಿ.