ಕೋವಿಡ್ ವಿರುದ್ಧ ಅಗತ್ಯವಿರುವ ರೋಗನಿರೋಧಕ ಶಕ್ತಿಯನ್ನು ಬೂಸ್ಟರ್ ಡೋಸ್ ಮೂಲಕ ವರ್ಧಿಸಬಹುದೇ ಎಂಬ ಪ್ರಶ್ನೆ ಎಲ್ಲೆಡೆ ಹಬ್ಬಿದ್ದು, ಡೆಲ್ಟಾ ವೈರಸ್ ಆಟಾಟೋಪ ಹೆಚ್ಚಾಗುತ್ತಿದ್ದಂತೆಯೇ ಭಾರತಕ್ಕೂ ಬೂಸ್ಟರ್ ಡೋಸ್ ಬೇಕೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೂಸ್ಟರ್ ಡೋಸ್‌ಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾತುಗಳು ಜೋರಾಗುತ್ತಿರುವ ನಡುವೆಯೇ ಸದ್ಯ ಕೊಡುತ್ತಿರುವ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಎಲ್ಲರೂ ಪಡೆಯಲಿ ಎಂದು ಭಾರತೀಯ ತಜ್ಞರು ಹೇಳುತ್ತಿದ್ದಾರೆ.
ಕೊರೊನಾ ಲಸಿಕೆ ಸ್ವೀಕರಿಸದವರಿಗೆ ಸಾರ್ವಜನಿಕ ಸೇವೆ ʼಬಂದ್ʼ ಮಾಡಿದೆ ಈ ಪಾಲಿಕೆ..!
“ದೇಶದ 15 ಪ್ರತಿಶತಕ್ಕಿಂತ ಕಡಿಮೆ ವಯಸ್ಕ ಮಂದಿಗೆ ಕೋವಿಡ್ ಲಸಿಕೆಯ ಎರಡೂ ಡೋಸ್ ನೀಡಲಾಗಿದೆ. ಸೋಂಕಿಗೆ ತುತ್ತಾಗಬಲ್ಲ ಬಹಳಷ್ಟು ಮಂದಿ ಇನ್ನೂ ಲಸಿಕೆ ಪಡೆಯುವುದು ಇದೆ ಎಂದು ಇದರಿಂದ ತಿಳಿಯುತ್ತದೆ. ಈ ನಿಟ್ಟಿನಲ್ಲಿ, ನೈತಿಕತೆಯ ದೃಷ್ಟಿಯಿಂದ, ಕೇವಲ ಕೆಲವೇ ಅದೃಷ್ಟವಂತರಿಗಾಗಿ ಮೂರನೇ ಲಸಿಕೆಯ ಬಗ್ಗೆ ಚಿಂತಿಸುವುದು ಸರಿಯಲ್ಲ” ಎಂದು ನವದೆಹಲಿಯ ರಾಷ್ಟ್ರೀಯ ರೋಗನಿರೋಧಕ ಸಂಸ್ಥೆಯ ತಜ್ಞರಾದ ಸತ್ಯಜಿತ್ ರತ್ ಹೇಳಿದ್ದಾರೆ.
ಕೋವಿಡ್ ಲಸಿಕೆ ಪಡೆಯಬೇಕಾಗಿರುವವರ ಪೈಕಿ 40%ದಷ್ಟು ಮಂದಿ ಇನ್ನೂ ಲಸಿಕೆಯನ್ನೇ ಪಡೆಯದೇ ಇರುವ ವೇಳೆ ಬೂಸ್ಟರ್ ಡೋಸ್‌ಗಳ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ ಎಂದು ರೋಗ ನಿರೋಧಕ ತಜ್ಞೆ ವಿನೀತಾ ಬಾಲ್ ಹೇಳುತ್ತಾರೆ.
ಮೊದಲು ಭಾರತದಲ್ಲಿ ಎಲ್ಲರೂ ಎರಡು ಡೋಸ್ ಪಡೆದುಕೊಳ್ಳಲಿ, ನಂತರ ಬೂಸ್ಟರ್ ಡೋಸ್ ಅಗತ್ಯತೆ ಎಷ್ಟಿದೆ ಎಂಬುದು ಗೊತ್ತಾಗಲಿದೆ. ಅಲ್ಲಿವರೆಗೂ ಬೂಸ್ಟರ್ ಚಿಂತೆ ಬೇಡ ಎಂಬುದು ಹಲವರ ಅಭಿಪ್ರಾಯವಾಗಿದೆ.