ಬಿಳಿ ಬಟ್ಟೆ ಕಲೆಯಾದರೆ ತೊಳೆಯುವುದು ತುಂಬಾ ಕಷ್ಟ. ಅದನ್ನು ಸಾಮಾನ್ಯವಾದ ಡಿಟರ್ಜೆಂಟ್ ಪೌಡರ್, ಸೋಪ್ ಬಳಸಿ ಸ್ವಚ್ಚ ಮಾಡಲು ಆಗುವುದಿಲ್ಲ. ಹಾಗಾಗಿ ಬಿಳಿ ಬಟ್ಟೆ ಮೇಲೆ ಯಾವುದೇ ರೀತಿಯ ಕಲೆಯಾದರೆ ಈ ಟಿಫ್ಸ್ ಫಾಲೋ ಮಾಡಿ.
*ಬಿಳಿ ಬಟ್ಟೆಯ ಮೇಲೆ ರಕ್ತ ಮತ್ತು ಎಣ್ಣೆಯ ಕಲೆಯಾದರೆ 4 ಹನಿ ಅಮೋನಿಯಾ, 1 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಮತ್ತು 2 ಲೀಟರ್ ನೀರನ್ನು ಮಿಕ್ಸ್ ಮಾಡಿ ಅದರಲ್ಲಿ ಕಲೆಯಾದ ಬಿಳಿ ಬಟ್ಟೆಯನ್ನು ನೆನೆಸಿ 1-2 ಗಂಟೆಗಳ ಕಾಲ ಬಿಟ್ಟು ಬಳಿಕ ಡಿಟರ್ಜೆಂಟ್ ನಿಂದ ವಾಶ್ ಮಾಡಿ.
*ಬಿಳಿ ಬಟ್ಟೆ ಹಳದಿ ಗಟ್ಟಿದ್ದರೆ ಅದನ್ನು ಬಿಳುಪಾಗಿಸಲು ವಾಷಿಂಗ್ ಮೆಷಿನ್ ಒಳಗೆ 3-4 ಆಸ್ಪಿರಿನ್ ಮಾತ್ರೆಗಳನ್ನು ಹಾಕಿ ಬಟ್ಟೆಗಳನ್ನು ವಾಶ್ ಮಾಡಿ. ಇದರಿಂದ ಬಟ್ಟೆ ಬಿಳುಪಾಗುತ್ತದೆ.
*ಬಿಳಿ ಬಟ್ಟೆಯ ಮೇಲೆ ಲಿಪ್ ಸ್ಟಿಕ್ ಮತ್ತು ಪೌಂಡೇಶನ್ ಕಲೆಗಳನ್ನು ತೆಗೆದು ಹಾಕಲು ಬ್ರೆಡ್ ನ್ನು ಉಂಡೆಯಾಗಿ ಮಾಡಿ ಅದರಿಂದ ಉಜ್ಜಿ ಬಳಿಕ ವಾಶ್ ಮಾಡಿ.
*ಬಿಳಿ ಬಟ್ಟೆಯ ಮೇಲೆ ಇಂಕ್ ಕಲೆಯಾಗಿದ್ದರೆ ಅದರ ಮೇಲೆ ಗ್ಲಾಸ್ ಕ್ಲೀನರ್ ಲಿಕ್ವಿಡ್ ನ್ನು ಸ್ಪ್ರೇ ಮಾಡಿ 5 ನಿಮಿಷ ಬಿಟ್ಟು ಎಂದಿನಂತೆ ಬಟ್ಟೆಯನ್ನು ತೊಳೆಯಿರಿ.
*ಬಿಳಿ ಬಟ್ಟೆಯ ಮೇಲೆ ಬೆವರಿನಿಂದ ಹಳದಿ ಕಲೆಯಾದರೆ 1 ಚಮಚ ಬೋರಿಕ್ ಆಮ್ಲಕ್ಕೆ ನೀರನ್ನು ಬೆರೆಸಿ ಕಲೆಗಳಿಗೆ ಹಾಕಿ 20 ನಿಮಿಷ ಬಿಟ್ಟು ವಾಶ್ ಮಾಡಿ.