alex Certify ಮಾನಸ ಸರೋವರ ಯಾತ್ರಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನಸ ಸರೋವರ ಯಾತ್ರಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಭಾರತೀಯರು ಚೀನಾ ಅಥವಾ ನೇಪಾಳದ ಮೂಲಕ ಹೋಗದೆ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 2023 ರ ವೇಳೆಗೆ ಉತ್ತರಾಖಂಡದ ಪಿಥೋರಗಢದಿಂದ ನೇರವಾಗಿ ಮಾನಸ ಸರೋವರಕ್ಕೆ ಹೋಗುವ ಮಾರ್ಗವನ್ನು ರೂಪಿಸಲಾಗುತ್ತಿದೆ ಎಂದು ರಸ್ತೆ ಮತ್ತು ಹೆದ್ದಾರಿ ಸಚಿವರು ಹೇಳಿದ್ದಾರೆ.

ಉತ್ತರಾಖಂಡದ ಮೂಲಕ ರಸ್ತೆಯು ಸಮಯವನ್ನು ಕಡಿತಗೊಳಿಸುವುದಲ್ಲದೆ, ಈಗಿನ ಅಪಾಯಕಾರಿ ದುರ್ಗಮ ಚಾರಣಕ್ಕಿಂತ ಭಿನ್ನವಾಗಿ ಸುಗಮ ಸವಾರಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಶ್ರೀನಗರ ಮತ್ತು ದೆಹಲಿ ಅಥವಾ ಮುಂಬೈ ನಡುವಿನ ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಸಚಿವಾಲಯವು ರಸ್ತೆ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಈ ಯೋಜನೆಗಳಿಗೆ 7,000 ಕೋಟಿ ರೂ. ನಿಯೋಜಿಸಲಾಗಿದೆ ಎಂದರು.

ರಸ್ತೆಗಾಗಿ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಲಡಾಕ್‌ನಿಂದ ಕಾರ್ಗಿಲ್, ಕಾರ್ಗಿಲ್‌ನಿಂದ ಝಡ್-ಮೋರ್, ಝಡ್-ಮೋರ್‌ನಿಂದ ಶ್ರೀನಗರ ಮತ್ತು ಶ್ರೀನಗರದಿಂದ ಜಮ್ಮು. Z-Morh ಸಿದ್ಧವಾಗುತ್ತಿದೆ. ಜೋಜಿಲಾ ಸುರಂಗದಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ. ಸುಮಾರು 1,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆ ಪೂರ್ಣಗೊಳಿಸಲು 2024ರ ಗಡುವು ನೀಡಿದ್ದೇವೆ ಎಂದು ಸಚಿವರು ಹೇಳಿದರು.

ನಿರ್ಮಾಣ ಹಂತದಲ್ಲಿರುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ ಪ್ರೆಸ್‌ ವೇ ದೆಹಲಿ ಮತ್ತು ಶ್ರೀನಗರ ನಡುವಿನ ಪ್ರಯಾಣವನ್ನು ಕೇವಲ 8 ಗಂಟೆವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಹೇಳಿದರು.

ರಸ್ತೆ ಸಚಿವಾಲಯವು 650 ವೇಸೈಡ್ ಸೌಕರ್ಯಗಳೊಂದಿಗೆ ಹೆದ್ದಾರಿಗಳನ್ನು ಸಜ್ಜುಗೊಳಿಸಲಿದೆ. ನಾವು 28 ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಇದು ವಿಮಾನಗಳಿಗೂ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಹೊಂದಿರುತ್ತದೆ. ಅಲ್ಲಿ ಡ್ರೋನ್‌ ಗಳೂ ಇಳಿಯಬಹುದು. ಅಪಘಾತದ ಸಂದರ್ಭದಲ್ಲಿ, ಹೆಲಿಕಾಪ್ಟರ್ ಆಂಬ್ಯುಲೆನ್ಸ್ ಕೂಡ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ.

ಇತರ ಯೋಜನೆಗಳ ಕುರಿತು ವಿವರಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೈಲು ಮಾರ್ಗವು ಎಲ್ಲೆಲ್ಲಿ ಹಾದುಹೋದರೂ ರಸ್ತೆ ಮೇಲ್ಸೇತುವೆ ಅಥವಾ ಆರ್‌ಒಬಿಗಳನ್ನು ಸ್ಥಾಪಿಸುವುದಾಗಿ ಹೇಳಿದರು. ಈ ಉಪಕ್ರಮವು ಸೇತು ಭಾರತಂ ಅಡಿಯಲ್ಲಿ ಬರುತ್ತದೆ, ಇದು ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೆ ಕ್ರಾಸಿಂಗ್‌ಗಳಿಂದ ಮುಕ್ತಗೊಳಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...