alex Certify ಇನ್ನಿಲ್ಲ ಮಾರಕ ಸೊಳ್ಳೆಗಳ ಭಯ…..! ಶೀಘ್ರದಲ್ಲೇ ಬರಲಿದೆ ಡೆಂಗ್ಯೂ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನಿಲ್ಲ ಮಾರಕ ಸೊಳ್ಳೆಗಳ ಭಯ…..! ಶೀಘ್ರದಲ್ಲೇ ಬರಲಿದೆ ಡೆಂಗ್ಯೂ ಲಸಿಕೆ

ಪ್ರತಿವರ್ಷ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಡೆಂಗ್ಯೂ ಜ್ವರ ಸಾವಿರಾರು ಜನರನ್ನು ಬಲಿ ಪಡೆಯುತ್ತದೆ. ಈ ಬಾರಿ ಕೂಡ ಅನೇಕರು ಡೆಂಫಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇನ್ಮೇಲೆ ಈ ಮಾರಕ ರೋಗಕ್ಕೆ ಹೆದರಬೇಕಾಗಿಲ್ಲ. ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಬರಲಿದೆ. ಡೆಂಗ್ಯೂ ಲಸಿಕೆಯ ಮೂರನೇ ಹಂತದ, ಮೊದಲ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಿದೆ. ಇದರ ಮೊದಲ ಲಸಿಕೆಯನ್ನು ಪಂಡಿತ್ ಭಾಗವತ್ ದಯಾಳ್ ಶರ್ಮಾ, ರೋಹ್ಟಕ್‌ನ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (PGIMS ರೋಹ್ಟಕ್) ಪರೀಕ್ಷಿಸಿದ್ದಾರೆ.

ಈ ಲಸಿಕೆ ಪರೀಕ್ಷೆಯನ್ನು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 19 ಸ್ಥಳಗಳಲ್ಲಿ ಮಾಡಲಾಗುತ್ತದೆ. 10,335 ಆರೋಗ್ಯವಂತ ಯುವಕರನ್ನು ಪರೀಕ್ಷೆಗೆ ಸೇರಿಸಲಾಗಿದೆ. ICMR ಮತ್ತು Panacea Biotec ಭಾರತದಲ್ಲಿ ಡೆಂಗ್ಯೂ ಲಸಿಕೆಯನ್ನು ಅಭಿವೃದ್ಧಿಪಡಿಸಲು ಮೊದಲ ಬಾರಿಗೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿವೆ. ಪ್ಯಾನೇಸಿಯಾ ಬಯೋಟೆಕ್ ಭಾರತದ ಸ್ಥಳೀಯ ಟೆಟ್ರಾವಲೆಂಟ್ ಡೆಂಗ್ಯೂ ಲಸಿಕೆ ‘ಡೆಂಗಿಆಲ್’ ಅನ್ನು ಅಭಿವೃದ್ಧಿಪಡಿಸಿದೆ.

ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಪ್ಯಾನೇಸಿಯ ಲಸಿಕೆಯು ಎಲ್ಲಾ ನಾಲ್ಕು ಡೆಂಗ್ಯೂ ಸಿರೊಟೈಪ್‌ಗಳ ದುರ್ಬಲಗೊಂಡ ಆವೃತ್ತಿಗಳನ್ನು ಬಳಸುತ್ತದೆ. ವೈರಸ್‌ನ ಈ ದುರ್ಬಲ ಆವೃತ್ತಿಗಳನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅವರು DENV1, DENV3 ಎಂದು ಇದನ್ನು ಕರೆಯುತ್ತಾರೆ.

ಡೆಂಗ್ಯೂ ಲಸಿಕೆ ಏಕೆ ಬೇಕು?

ಡೆಂಗ್ಯೂ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು  ನಿರಂತರವಾಗಿ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಜಾಗತಿಕ ಮಟ್ಟದಲ್ಲಿ 2000ನೇ ಇಸ್ವಿಯಲ್ಲಿ 5,05,430 ಪ್ರಕರಣಗಳು ಪತ್ತೆಯಾಗಿದ್ದವು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲಿ ಈ ರೋಗವು 2001 ರಲ್ಲಿ ಕೇವಲ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ 2022ರ ಹೊತ್ತಿಗೆ ಎಲ್ಲಾ ರಾಜ್ಯಗಳಿಗೆ ಹರಡಿತು. 75-80 ಪ್ರತಿಶತ ಪ್ರಕರಣಗಳಲ್ಲಿ ರೋಗಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ, ಹಾಗಾಗಿ ರೋಗಿಗಳ ಸಾವು ಕೂಡ ಸಂಭವಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...