alex Certify BIG NEWS: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೂ ಭಾರತವೇ ಸುರಕ್ಷಿತ ; ಇಲ್ಲಿದೆ ಜನತೆಗೆ ನೆಮ್ಮದಿ ನೀಡುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೂ ಭಾರತವೇ ಸುರಕ್ಷಿತ ; ಇಲ್ಲಿದೆ ಜನತೆಗೆ ನೆಮ್ಮದಿ ನೀಡುವ ಮಾಹಿತಿ

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾವು, ನೋವಿನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. ವಿಶ್ವದಲ್ಲಿ ಕೊರೊನಾ ಅಬ್ಬರದ ನಡುವೆಯೂ ಭಾರತ ಸುರಕ್ಷಿತ ಎಂದು ಹೇಳಲಾಗಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣದ ಪ್ರಮಾಣ ಅತ್ಯಂತ ಕಡಿಮೆ ಇದೆ.

ಬೆಲ್ಜಿಯಂನಲ್ಲಿ 10,16,609 ಸೋಂಕಿತರಲ್ಲಿ 24,551 ಮಂದಿ ಸಾವನ್ನಪ್ಪಿದ್ದು ಪ್ರತಿ 1 ಲಕ್ಷ ಜನರಲ್ಲಿ 214 ಮಂದಿ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ 4,11,210 ಸೋಂಕಿತರಲ್ಲಿ 1,22,833 ಜನ ಮೃತಪಟ್ಟಿದ್ದು, ಪ್ರತಿ 1 ಲಕ್ಷ ಜನರಲ್ಲಿ 204 ಮಂದಿ ಸಾವನ್ನಪ್ಪಿದ್ದಾರೆ.

ಯುನೈಟೆಡ್ ಕಿಂಗ್ಡಮ್ ನಲ್ಲಿ 44,50,578 ಸೋಂಕಿತರಲ್ಲಿ 1,27,865 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 191 ಜನ ಮೃತಪಟ್ಟಿದ್ದಾರೆ.

ಅಮೆರಿಕದಲ್ಲಿ 3,27,07,750 ಜನರಿಗೆ ಸೋಂಕು ತಗಲಿದ್ದು, 5,81,754 ಜನ ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 177 ಜನ ಮೃತಪಟ್ಟಿದ್ದಾರೆ.

ಫ್ರಾನ್ಸ್ ನಲ್ಲಿ 58,38,295 ಜನರಿಗೆ ಸೋಂಕು ತಗಲಿದ್ದು, 1,06,553 ಜನ ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 159 ಜನ ಮೃತಪಟ್ಟಿದ್ದಾರೆ.

ಸ್ವೀಡನ್ ನಲ್ಲಿ 10,07,792 ಸೋಂಕಿತರಲ್ಲಿ 14,793 ಮಂದಿ ಮೃತಪಟ್ಟಿದ್ದು, ಪ್ರತಿ 1 ಲಕ್ಷ ಜನರಲ್ಲಿ 138 ಜನ ಮೃತಪಟ್ಟಿದ್ದಾರೆ.

ಸ್ವಿಟ್ಜರ್ ಲೆಂಡ್ ನಲ್ಲಿ 6,70,673 ಸೋಂಕಿತರಲ್ಲಿ 10,706 ಮಂದಿ ಮೃತಪಟ್ಟಿದ್ದಾರೆ, ಪ್ರತಿ 1 ಲಕ್ಷ ಜನರಲ್ಲಿ 125 ಜನ ಮೃತಪಟ್ಟಿದ್ದಾರೆ.

ಆಸ್ಟ್ರಿಯಾದಲ್ಲಿ 6,31,076 ಜನರಿಗೆ ಸೋಂಕು ತಗಲಿದ್ದು, 10,382 ಜನ ಮೃತಪಟ್ಟಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 117 ಜನ ಮೃತಪಟ್ಟಿದ್ದಾರೆ.

ಜರ್ಮನಿಯಲ್ಲಿ 35,30,887 ಜನರಿಗೆ ಸೋಂಕು ತಗುಲಿದ್ದು, 84,844 ಜನ ಸಾವನ್ನಪ್ಪಿದ್ದಾರೆ. ಪ್ರತಿ 1 ಲಕ್ಷ ಜನರಲ್ಲಿ 102 ಜನ ಮೃತಪಟ್ಟಿದ್ದಾರೆ.

ಭಾರತದಲ್ಲಿ 2,26,62, 575 ಮಂದಿಗೆ ಸೋಂಕು ತಗಲಿದ್ದು, 2,46,116 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ಒಂದು ಲಕ್ಷ ಜನರಲ್ಲಿ 18.01 ಮಂದಿ ಮೃತಪಟ್ಟಿದ್ದಾರೆ.

ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. https://coronavirus.jhu.edu/data/mortality ಇಲ್ಲಿ ಗಮನಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...