ಬೆಳಗಿನ ಉಪಾಹಾರಕ್ಕೆ ಅನೇಕರು ವೈಟ್ ಬ್ರೆಡ್ ಸೇವಿಸ್ತಾರೆ. ಮಕ್ಕಳಿಗೆ ಕೂಡ ವೈಟ್ ಬ್ರೆಡ್‌ನಿಂದ ಮಾಡಿದ ಸ್ಯಾಂಡ್ವಿಚ್‌ಗಳನ್ನು ಸ್ಕೂಲ್ ಟಿಫಿನ್‌ಗೆ ಕೊಡುವುದು ಸಾಮಾನ್ಯ. ಸಂಜೆಯ ಸ್ನಾಕ್ಸ್‌ಗೂ ಹಲವರು ವೈಟ್ ಬ್ರೆಡ್ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಮಾರಕ ಅನ್ನೋದು ಜನರಿಗೆ ತಿಳಿದಿಲ್ಲ.
ಡಯಟಿಷಿಯನ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಬ್ರೆಡ್ ತಯಾರಿಕೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದವರು ವೈಟ್ ಬ್ರೆಡ್‌ನಿಂದ ದೂರ ಓಡುವುದು ಖಚಿತ. ಬ್ರೆಡ್ ಎಷ್ಟು ಅನಾರೋಗ್ಯಕರ ಎಂಬುದಕ್ಕೆ ಇದೇ ಸಾಕ್ಷಿ. ಅನೇಕ ಬೇಕರಿಗಳಲ್ಲಿ ಸ್ವಚ್ಛತೆಯ ಬಗ್ಗೆ ಕೂಡ ಕಾಳಜಿ ವಹಿಸುವುದಿಲ್ಲ. ಕೆಲಸಗಾರರು ಹ್ಯಾಂಡ್ ಗ್ಲೌಸ್ ಕೂಡ ಧರಿಸುವುದಿಲ್ಲ.
ಭಾರತದಲ್ಲಿ ಬ್ರೆಡ್ ವಿಷವಾಗಿದೆ. ಬೆಲೆ ಕಡಿಮೆ ಅನ್ನೋ ಕಾರಣಕ್ಕೆ ಬೇಕರಿಗಳಲ್ಲಿ ಕೂಡ ವಿವಿಧ ತಿನಿಸುಗಳಿಗೆ ಅದನ್ನು ಬಳಸಲಾಗುತ್ತದೆ. ಅಧ್ಯಯನದ ಪ್ರಕಾರ ಬ್ರೆಡ್‌ನ ಒಂದು ಸ್ಲೈಸ್‌ನಲ್ಲಿ ಸರಿಸುಮಾರು 3 ಗ್ರಾಂ ಸಕ್ಕರೆ ಇರುತ್ತದೆ. ಮೈದಾ ಮತ್ತು ಉಪ್ಪನ್ನು ಕೂಡ ಬ್ರೆಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕ್ಯಾರಮೆಲ್, ಸಕ್ಕರೆ ಮತ್ತು ವನಸ್ಪತಿ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಮಾರಕ. ಹಾಗಾಗಿ ವೈಟ್ ಬ್ರೆಡ್‌ನಿಂದ ದೂರವಿರಿ ಅನ್ನೋದು ಪೌಷ್ಠಿಕಾಂಶ ತಜ್ಞರ ಸಲಹೆ.