ಸದಾಕಾಲ ಕಿರುಕುಳ ನೀಡಿ ಹಿಂಸಿಸುತ್ತಿದ್ದ ತನ್ನ ಪತಿಯಿಂದ ವಿಚ್ಛೇದನ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿದಾರ ಮಹಿಳೆ ವಿಚ್ಛೇದನ ಪಡೆಯಲು ಅರ್ಹರಿದ್ದಾರೆ ಎಂದು ತಿಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಹಾಗೂ ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ನ್ಯಾಯಪೀಠ, ಪತಿಗೆ ತನ್ನ ಪತ್ನಿಯನ್ನು ಹೊಡೆಯುವ ಹಾಗೂ ಹಿಂಸಿಸುವ ಹಕ್ಕನ್ನು ಯಾವುದೇ ಕಾನೂನು ನೀಡುವುದಿಲ್ಲ ಎಂದು ಹೇಳಿದೆ.
ಈ ಪ್ರಕರಣದಲ್ಲಿ ಪತಿ, ತನ್ನ ಪತ್ನಿಯನ್ನು ಈಗಾಗಲೇ ತೊರೆದಿದ್ದಾರೆ. ಅಲ್ಲದೆ, ಆಕೆಯನ್ನು ವಾಪಸ್ ಕರೆ ತರುವ ಯಾವುದೇ ಉದ್ದೇಶವನ್ನು ಪತಿ ಹೊಂದಿದಂತೆ ಕಾಣುತ್ತಿಲ್ಲ. ಪತಿ-ಪತ್ನಿ ದೈಹಿಕವಾಗಿ ಬೇರ್ಪಟ್ಟಿರುವುದು ಸಾಬೀತಾಗಿದ್ದು, ಹೀಗಾಗಿ ಅರ್ಜಿದಾರ ಮಹಿಳೆ ವಿಚ್ಛೇದನ ಪಡೆಯಲು ಅರ್ಹರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.