ಮಸಾಜ್ ಸೆಂಟರ್ ಗಳಲ್ಲಿ ಈಗ ಅಕ್ರಮ ದಂಧೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪೂರ್ವ ದೆಹಲಿ ಕಾರ್ಪೋರೇಶನ್ ಮಹತ್ವದ ಹೆಜ್ಜೆಯಿಟ್ಟಿದೆ. ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಬೇಕಾಬಿಟ್ಟಿ ಮಸಾಜ್ ಸೆಂಟರ್ ತೆಗೆಯುವಂತಿಲ್ಲ. ಪಿಸಿಯೋಥೆರಪಿ, ಆಕ್ಯುಪ್ರೆಶರ್ ಅಥವಾ ಅದಕ್ಕೆ ಸಂಬಂಧಿಸಿದ ಡಿಪ್ಲೊಮಾ ಮಾಡಿದವರು ಮಾತ್ರ ಸ್ಪಾ ಕೇಂದ್ರಗಳಲ್ಲಿ ಮಸಾಜ್ ಮಾಡಬೇಕು. ಮುನ್ಸಿಪಲ್ ಕಾರ್ಪೊರೇಷನ್ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಸ್ಪಾ ಕೇಂದ್ರಗಳಲ್ಲಿನ ಕೊಠಡಿಗಳ ಬಾಗಿಲುಗಳಿಗೆ ಬೀಗ ಇರಬಾರದು. ಬಾಗಿಲುಗಳು ಸ್ವಯಂ ಮುಚ್ಚಲ್ಪಡುವಂತಿರಬೇಕು. ಹಾಗೆ ಪುರುಷರ ಸ್ಪಾ ಸೆಂಟರ್ ನಲ್ಲಿ ಮಹಿಳೆಯರು ಹಾಗೂ ಮಹಿಳೆಯರ ಸ್ಪಾ ಸೆಂಟರ್ ನಲ್ಲಿ ಪುರುಷ ಸಿಬ್ಬಂದಿಗೆ ಅವಕಾಶವಿಲ್ಲ.
ಸ್ಪಾ ಕೇಂದ್ರಗಳ ಹೊಸ ನಿಯಮಗಳ ಪ್ರಕಾರ, ಈಗ ಗ್ರಾಹಕರು ತಮ್ಮ ಫೋಟೋ ಐಡಿಯನ್ನು ತೋರಿಸಬೇಕಾಗುತ್ತದೆ. ಸ್ಪಾ ಕೇಂದ್ರಗಳು, ಗ್ರಾಹಕರ ಫೋಟೋ ಐಡಿ ಕಾರ್ಡ್ಗಳೊಂದಿಗೆ ಫೋನ್ ಸಂಖ್ಯೆಗಳನ್ನು ನೋಂದಾಯಿಸಬೇಕು. ಸ್ಪಾ ಕೇಂದ್ರಗಳು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಮಾತ್ರ ತೆರೆಯಬೇಕು.
ಸ್ಪಾ ಕೇಂದ್ರಗಳ ಮಾಲೀಕರು, ಸ್ಪಾ ಕೇಂದ್ರಕ್ಕೆ ಪ್ರಮಾಣ ಪತ್ರವನ್ನು ಪಡೆಯಬೇಕು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಯಿಂದ ಪ್ರಮಾಣ ಪತ್ರವನ್ನು ಪಡೆಯಬೇಕು.