ಹೋಟೆಲ್ಗಳು ಅಂದ್ಮೇಲೆ ಅಲ್ಲಿ ಮೆನು ಕಾರ್ಡ್ ಇರೋದು ಸರ್ವೇ ಸಾಮಾನ್ಯ. ಆದರೆ ಪುಣೆಯ ರೆಸ್ಟೋರೆಂಟ್ ಒಂದರ ಮೆನು ಕಾರ್ಡ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈ ರೆಸ್ಟೋರೆಂಟ್ ನ ಮೆನು ಕಾರ್ಡ್ನ್ನು ಶೇರ್ ಮಾಡಲಾಗಿದೆ.
ಪುಣೆಯ ಇರಾನಿ ಕೆಫೆಯ ಮೆನು ಕಾರ್ಡ್ನಲ್ಲಿ ಗ್ರಾಹಕರಿಗೆ ಕೆಲ ಸೂಚನೆಗಳನ್ನ ನೀಡಲಾಗಿದ್ದು ಇದನ್ನು ಕಂಡ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಸೂಚನಾ ಫಲಕದಲ್ಲಿ, ಲ್ಯಾಪ್ಟಾಪ್ ಬಳಕೆ ಮಾಡುವಂತಿಲ್ಲ, ಸಾಲ ಸೌಲಭ್ಯ ಲಭ್ಯವಿಲ್ಲ, ಹೊರಗಡೆಯ ಆಹಾರಕ್ಕೆ ಅನುಮತಿಯಿಲ್ಲ, ದೊಡ್ಡ ಧ್ವನಿಯಲ್ಲಿ ಮಾತನಾಡುವಂತಿಲ್ಲ, ಬೆಂಕಿಪಟ್ಟಣ ತರುವಂತಿಲ್ಲ, ಚೌಕಾಶಿ ಮಾಡಬಾರದು, ತಲೆ ಬಾಚಿಕೊಳ್ಳಲು ಹಾಗೂ ಬ್ರಶ್ ಮಾಡಲು ಅವಕಾಶವಿಲ್ಲ, ಖುರ್ಚಿಯ ಮೇಲೆ ಕಾಲು ಹಾಕಬಾರದು, ಮೊಬೈಲ್ ಗೇಮ್ ಆಡುವಂತಿಲ್ಲ, ಕ್ಯಾಶಿಯರ್ ಜೊತೆ ಫ್ಲರ್ಟ್ ಮಾಡುವಂತಿಲ್ಲ ಹಾಗೂ ಉಚಿತ ಸಲಹೆ ನೀಡುವಂತಿಲ್ಲ ಎಂದು ಹಾಕಲಾಗಿದೆ.
ಇರಾನಿ ಕೆಫೆಯ ಈ ಮೆನು ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.