
ನವದೆಹಲಿ: ದೆಹಲಿಯ ಕೆಂಪುಕೋಟೆ ಮೇಲೆ ಕಿಡಿಗೇಡಿಗಳು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಕೆಂಪುಕೋಟೆಯ ಟಿಕೆಟ್ ಕೌಂಟರ್, ಸೆಕ್ಯೂರಿಟಿ ಕೌಂಟರ್, ಮೆಟಲ್ ಡಿಟೆಕ್ಟರ್, ಸ್ಕ್ಯಾನಿಂಗ್ ಯಂತ್ರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ನಿನ್ನೆ ಧರಣಿಯ ವೇಳೆ ನುಗ್ಗಿದ ಕಿಡಿಗೇಡಿಗಳ ಗುಂಪು ಗಾಜುಗಳನ್ನು ಪುಡಿಗೈದು, ಕಬ್ಬಿಣದ ಗ್ರಿಲ್, ಗೇಟ್ ಗಳಿಗೆ ಹಾನಿ ಮಾಡಿದೆ.
ಮೆಟಲ್ ಡಿಟೆಕ್ಟರ್, ಸ್ಕ್ಯಾನಿಂಗ್ ಯಂತ್ರಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ದಿನಗಳ ಕಾಲ ಜನರಿಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎನ್ನಲಾಗಿದೆ.