alex Certify ಸ್ಯಾನ್‌ ಫ್ರಾನ್ಸಿಸ್ಕೋ ಬೀದಿಯಲ್ಲಿ ಓಡಾಡಲು ಸಜ್ಜಾಗಿವೆ ರೋಬೋ‌ ಟ್ಯಾಕ್ಸಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನ್‌ ಫ್ರಾನ್ಸಿಸ್ಕೋ ಬೀದಿಯಲ್ಲಿ ಓಡಾಡಲು ಸಜ್ಜಾಗಿವೆ ರೋಬೋ‌ ಟ್ಯಾಕ್ಸಿಗಳು

ಚಾಲಕರಹಿತ ವಾಹನಗಳ ಟ್ರೆಂಡ್ ದಿನೇ ದಿನೇ ಏರುತ್ತಿರುವ ನಡುವೆ ಆಟೋಪೈಲಟ್ ತಂತ್ರಾಂಶ ಭಾರೀ ಸದ್ದು ಮಾಡುತ್ತಿದೆ. ಇದೇ ಹಾದಿಯಲ್ಲಿ ಬಂದಿರುವ ಹೊಸ ಆವಿಷ್ಕಾರವಾದ ’ರೋಬೋ ಟ್ಯಾಕ್ಸಿ’ ಅಮೆರಿಕದ ರಸ್ತೆಗಳ ಮೇಲೆ ಓಡಾಡಲು ಕಾದು ಕುಳಿತಿದೆ.

ಅಮೆರಿಕದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಸ್ಯಾನ್ ಫ್ರಾನ್ಸಿಸ್ಕೋದ ಬೀದಿಗಳಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸರ್ಕಾರದ ಅನುಮತಿಗೆ ಕಾಯುತ್ತಿವೆ ಈ ರೋಬೋ ಟ್ಯಾಕ್ಸಿಗಳು..

ಜನರಲ್‌ ಮೋಟರ್ಸ್‌ನ ಕ್ರೂಸ್ ಹಾಗೂ ಗೂಗಲ್‌ನ ವೇಯ್ಮೋ ಈ ರೋಬೋಟ್ಯಾಕ್ಸಿಗಳನ್ನು ಓಡಿಸಲು ಸಜ್ಜಾಗಿರುವ ಸಂಸ್ಥೆಗಳು. ಸಾಂಪ್ರದಾಯಿಕ ಟ್ಯಾಕ್ಸಿ ಸೇವೆಗಳನ್ನು ಕೊಡಮಾಡುತ್ತಿರುವ ಊಬರ್‌ ಮತ್ತು ಲಿಫ್ಟ್‌ಗಳೊಂದಿಗೆ ಸ್ಫರ್ಧಿಸಲಿವೆ ಕ್ರೂಸ್ ಹಾಗೂ ವೇಯ್ಮೋ.

ಕಳೆದ ಜೂನ್‌ನಿಂದ ನಗರದ ಕೆಲ ಪ್ರದೇಶಗಳಲ್ಲಿ ರಾತ್ರಿ ವೇಳೆ ರೋಬೋ ಟ್ಯಾಕ್ಸಿ ಸಂಚಾರದ ಅನುಭವವನ್ನು ಕ್ರೂಸ್ ಕೊಡಮಾಡುತ್ತಿದೆ. ವೆಯ್ಮೋ ಸಹ ನಗರವಾಸಿಗಳಿಗೆ ತನ್ನ ಸೇವೆಯ ಉಚಿತ ಅನುಭವವನ್ನು ನೀಡುತ್ತಿದೆ. ಈ ಸೇವೆಗಳಿಗೆ ಶುಲ್ಕ ವಿಧಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿವೆ ಎರಡೂ ಸಂಸ್ಥೆಗಳು.

ಗೂಗಲ್ 14 ವರ್ಷಗಳಿಂದಲೂ ರೊಬೋಟಿಕ್ ವಾಹನಗಳ ಆವಿಷ್ಕಾರದ ಕೆಲಸದಲ್ಲಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ರೋಬೋಟ್ಯಾಕ್ಸಿಗಳನ್ನು ಓಡಿಸುವ ಇದಾದೆಯನ್ನು ಕ್ರೂಸ್ ಹಾಗೂ ವೆಯ್ಮೋ ಹೊಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...