alex Certify ’ಪ್ರಜಾಪ್ರಭುತ್ವ ಎಲ್ಲ ನಡೆಯೋದಿಲ್ಲ, ಏನಿದ್ರೂ ಶರಿಯಾ ಕಾನೂನೇ ಇಲ್ಲಿ’: ತಾಲಿಬಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಪ್ರಜಾಪ್ರಭುತ್ವ ಎಲ್ಲ ನಡೆಯೋದಿಲ್ಲ, ಏನಿದ್ರೂ ಶರಿಯಾ ಕಾನೂನೇ ಇಲ್ಲಿ’: ತಾಲಿಬಾನ್

ಅಫ್ಘಾನಿಸ್ತಾನವನ್ನು ಅಕ್ಷರಶಃ ವಶಕ್ಕೆ ಪಡೆದಿರುವ ತಾಲಿಬಾನ್ ಆಡಳಿತದಲ್ಲಿ ಮುಂದಿನ ದಿನಗಳು ಶರಿಯಾ ಕಾನೂನಿನ ಆಳ್ವಿಕೆ ಕಾಣಲಿವೆ ಎಂದು ಇನ್ನಷ್ಟು ಸ್ಪಷ್ಟವಾಗಿದೆ.

ತಾಲಿಬಾನ್ ಸಂಘಟನೆಯ ನಿರ್ಣಾಯಕ ಅಂಗದ ಭಾಗವಾಗಿರುವ ವಹೀದುಲ್ಲಾ ಹಶಿಮಿ ಈ ಕುರಿತು ಮಾತನಾಡಿ, “ಅಫ್ಘಾನಿಸ್ತಾನದಲ್ಲಿ ಯಾವ ರೀತಿಯ ರಾಜಕೀಯ ವ್ಯವಸ್ಥೆ ತರಬೇಕೆಂದು ನಾವು ಚರ್ಚೆಯೇ ಮಾಡುವುದಿಲ್ಲ. ಶರಿಯಾ ಕಾನೂನು ಬರಲಿದೆ ಅಷ್ಟೇ” ಎಂದಿದ್ದಾನೆ.

“ಪ್ರಜಾಪ್ರಭುತ್ವದ ಯಾವುದೇ ವ್ಯವಸ್ಥೆಗೆ ನಮ್ಮ ದೇಶದಲ್ಲಿ ನೆಲೆಯಿಲ್ಲ. ಆಡಳಿತದ ಸಂಬಂಧ ಮುಂದಿನ ದಿನಗಳಲ್ಲಿ ತಾಲಿಬಾನ್ ನಾಯಕತ್ವ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದೆ” ಎಂದು ಹಶಿಮಿ ತಿಳಿಸಿದ್ದಾನೆ.

ಕೊರೊನಾ ಸಂಕಷ್ಟದ ನಡುವೆ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟು ಹಾಕಿದ ‘ಬೆಲ್​ಬಾಟಂ’….!

ತಾಲಿಬಾನ್‌ನ ಉನ್ನತ ಸಮಿತಿಯ ಮುಖ್ಯಸ್ಥನಾಗಿ ಮುಲ್ಲಾ ಹೈಬಾತುಲ್ಲಾ ಅಖುಂಜ಼ಾದಾ ಇರಲಿದ್ದು, ಈತನ ನೇತೃತ್ವದಲ್ಲಿ ಅಫ್ಘಾನಿಸ್ತಾನದ ದೈನಂದಿನ ಆಡಳಿತದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 1996-2001ರ ನಡುವೆ ಇದೇ ರೀತಿ ತಾಲಿಬಾನ್ ಸಮಿತಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳ ಮೇಲೆ ಮುಲ್ಲಾ ಓಮರ್‌‌ನ ಮುದ್ರೆ ಇರುತ್ತಿತ್ತು.

ಇದೇ ವೇಳೆ, ಅಫ್ಘಾನಿಸ್ತಾನ ಸಶಸ್ತ್ರ ಪಡೆಗಳ ಕಮಾಂಡರ್‌ಗಳನ್ನು ತನ್ನ ಪಡೆಗಳಿಗೆ ಸೇರಲು ಕೋರಿ ಭೇಟಿ ಮಾಡಲಾಗುವುದು ಎಂದು ಹಶಿಮಿ ತಿಳಿಸಿದ್ದಾನೆ. ಇದುವರೆಗೂ ಅಫ್ಘಾನಿಸ್ತಾನದ ಜನ ಚುನಾಯಿತ ಸರ್ಕಾರದ ಪರವಾಗಿ ಕರ್ತವ್ಯದಲ್ಲಿದ್ದ ಸಶಸ್ತ್ರ ಪಡೆಗಳ ಸೈನಿಕರನ್ನು ತಾಲಿಬಾನ್‌ನ ಹೊಸ ರಾಷ್ಟ್ರೀಯ ಪಡೆಯ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ತಾಲಿಬಾನ್‌ಗೆ ಅಧಿಕಾರ ಹಸ್ತಾಂತರ ಮಾಡುವ ಸಂಬಂಧ ಸಂಘಟನೆಯ ಪ್ರಮುಖರೊಂದಿಗೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜ಼ಾಯ್ ಹಾಗೂ ಮತ್ತೊಬ್ಬ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಮಾತುಕತೆಯಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...