ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಯಲು ಮುಂದಾಗಿರುವ ಕೇಂದ್ರದ ಆರೋಗ್ಯ ಮಂತ್ರಾಲಯ ಕಳುಹಿಸಿದ್ದ ಪತ್ರಗಳಿಗೆ 14 ರಾಜ್ಯಗಳಿಂದ ಪ್ರತಿಕ್ರಿಯೆ ಬಂದಿದೆ.
ಕರ್ನಾಟಕ ಸೇರಿ ಇನ್ನೂ 16 ರಾಜ್ಯಗಳಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರತಿಕ್ರಿಯೆ ಕೊಟ್ಟ 14 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಪಂಜಾಬ್‌ನಲ್ಲಿ ಮಾತ್ರವೇ ಆಮ್ಲಜನಕದ ಕೊರತೆಯಿಂದ ನಾಲ್ಕು ಸಾವುಗಳು ಸಂಭವಿಸಿವೆ.
ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..
ಆಗಸ್ಟ್ 13ರೊಳಗೆ ಈ ಬಗ್ಗೆ ದತ್ತಾಂಶ ಕಳುಹಿಸಲು ಕೇಂದ್ರ ಸರ್ಕಾರ ಕೋರಿದ್ದು, ಮಿಕ್ಕ ರಾಜ್ಯಗಳಿಂದ 2-3 ದಿನಗಳಲ್ಲಿ ಪ್ರತಿಕ್ರಿಯೆ ಬರುವ ನಿರೀಕ್ಷೆ ಕೇಂದ್ರಕ್ಕೆ ಇದೆ. ಈ ದತ್ತಾಂಶವನ್ನು ಸಂಸತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಸಕ್ತ ಮಾನ್ಸೂನ್ ಅಧಿವೇಶನದ ಸಂದರ್ಭದಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆಯಿದೆ.
ಕೋವಿಡ್ ಎರಡನೇ ಅಲೆ ವೇಳೆ ದೇಶಾದ್ಯಂತ ಆಮ್ಲಜನಕದ ಕೊರತೆಯಿಂದಾಗಿ ವಿಪರೀತ ಸಾವುಗಳು ಸಂಭವಿಸುತ್ತಿವೆ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವ (ರಾಜ್ಯ ಖಾತೆ) ಡಾ. ಭಾರತಿ ಪ್ರವೀಣ್ ಪವಾರ್, ಆರೋಗ್ಯವು ರಾಜ್ಯ ಸರ್ಕಾರಗಳ ವಿಷಯವಾಗಿದ್ದು, ಇದರಂತೆ ಸಾವಿನ ಪ್ರಕರಣಗಳ ಕುರಿತು ರಾಜ್ಯಗಳು ಕೇಂದ್ರದೊಂದಿಗೆ ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ ಎಂದಿದ್ದರು.