ಬೆಂಗಳೂರು: ದಾಖಲಾದ ಜನ್ಮ ದಿನಾಂಕವನ್ನು ಉದ್ಯೋಗಿ ನಿವೃತ್ತಿಯಾದ ನಂತರ ಬದಲಾಯಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಲ್ಫ್ ಡ್ರಾಯಿಂಗ್ ಪ್ರೋಸೆಸರ್ ಉತ್ಪಾದನೆ ಘಟಕದಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ಈ ತೀರ್ಪು ನೀಡಲಾಗಿದೆ. ವ್ಯಕ್ತಿ ಕೆಲಸಕ್ಕೆ ನೇಮಕವಾದ ಸಂದರ್ಭದಲ್ಲಿ ತಮ್ಮ ಜನ್ಮ ದಿನಾಂಕವನ್ನು ಮಾರ್ಚ್ 30, 1952 ಎಂದು ಮೌಖಿಕವಾಗಿ ನೀಡಿದ್ದರು. ಅವರು ಯಾವುದೇ ಪುರಾವೆ ನೀಡಿರಲಿಲ್ಲ. ಆದರೆ, ಅವರ ದಾಖಲಾತಿ ಸಂದರ್ಭದಲ್ಲಿ ಅವರ ಜನ್ಮ ದಿನಾಂಕವನ್ನು 10,03.1948 ಎಂದು ದಾಖಲಿಸಲಾಗಿದೆ.
ಅರ್ಜಿದಾರರು ತಮ್ಮ ಭವಿಷ್ಯ ನಿಧಿ ಘೋಷಣೆಯಲ್ಲಿ ಒದಗಿಸಿದ ವಿವರಗಳು ಅವರ ಶಾಲೆಯ ಪ್ರಮಾಣ ಪತ್ರ ಆಧರಿಸಿದೆ. 10.19.1983 ರಂದು ಉದ್ಯೋಗಕ್ಕೆ ಸೇರಿದ್ದು 09.3.2006 ರಂದು ನಿವೃತ್ತರಾಗಿದ್ದಾರೆ. ತಮ್ಮ ಭವಿಷ್ಯ ನಿಧಿ ಘೋಷಣೆಯಲ್ಲಿ ಒದಗಿಸಿದ ವಿವರ ಶಾಲಾ ದಾಖಲೆ ಆಧರಿಸಿದೆ. ಅದರ ಪ್ರಕಾರ ಅವರು 58 ವರ್ಷ ನಿವೃತ್ತಿ ವಯಸ್ಸು ತಲುಪಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಏಕ ಸದಸ್ಯಪೀಠ ರಿಟ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಉದ್ಯೋಗಿ ನಿವೃತ್ತಿ ನಂತರ ದಾಖಲಾದ ಜನ್ಮ ದಿನಾಂಕ ಬದಲಾಯಿಸಲಾಗದು ಎಂದು ಹೇಳಿದೆ.