alex Certify 5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರೈಲ್ವೇ ಬುಧವಾರ ಸ್ಪಷ್ಟಪಡಿಸಿದೆ.

ಒಂದರಿಂದ ನಾಲ್ಕು ವರ್ಷದೊಳಗಿನವರಿಗೆ ಸಹ ವಯಸ್ಕರಿಗೆ ವಿಧಿಸುವ ದರ ವಿಧಿಸಲಾಗುತ್ತದೆ ಎಂದು ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದೆ.

ರೈಲ್ವೆ ಸಚಿವಾಲಯದ ಮಾರ್ಚ್​ 6, 2020ರ ಸುತ್ತೋಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದೆ.

ಆದರೆ ಅಂತಹ ಸಂದರ್ಭದಲ್ಲಿ, ಪ್ರತ್ಯೇಕ ಬರ್ತ್ ಅಥವಾ ಆಸನವನ್ನು (ಚೇರ್​ ಕಾರ್​ನಲ್ಲಿ) ಒದಗಿಸಲಾಗುವುದಿಲ್ಲ. ಪ್ರಯಾಣಿಕರು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ಮಕ್ಕಳಿಗೆ ಬರ್ತ್ ಅಥವಾ ಆಸನಗಳ ಅಗತ್ಯವಿದ್ದರೆ ಟಿಕೆಟ್​ ಖರೀದಿಸಬಹುದು. ಆ ಸಂದರ್ಭದಲ್ಲಿ ಪೂರ್ಣ ಶುಲ್ಕವನ್ನು ವಿಧಿಸಲಾಗುತ್ತದೆ.

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ನಿಯಮವನ್ನು ಬದಲಾಯಿಸಿದೆ ಎಂದು ಇತ್ತೀಚಿನ ಕೆಲವು ಮಾಧ್ಯಮ ವರದಿಗಳು ಬಂದಿದ್ದು, ಈ ವರದಿಗಳ ಪ್ರಕಾರ ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳು ಟಿಕೆಟ್​ ಪಡೆಯಬೇಕಾಗುತ್ತದೆ.

ಈ ಸುದ್ದಿ ತಪ್ಪು ದಾರಿಗೆಳೆಯುವಂತಿವೆ. ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಯಾವುದೇ ಬದಲಾವಣೆಗಳನ್ನು ತಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...