ರೈಲಿನಲ್ಲಿ ಸಿಗೋ ಊಟ ಆಗಲಿದೆ ದುಬಾರಿ. ರೈಲು ಪ್ರಯಾಣದ ವೇಳೆ ಪ್ಯಾಂಟ್ರಿಯಲ್ಲಿ ಊಟ ಮಾಡ್ಬೇಕು ಅಂದ್ರೆ ,ಇರಲೇ ಬೇಕು ಜೇಬು ತುಂಬ ದುಡ್ಡು. ಇದೇ ಸುದ್ದಿ ಈಗ ಎಲ್ಲರ ಬಾಯಲ್ಲಿ ಕೇಳಿ ಬರ್ತಿದೆ. ಈ ಸುದ್ದಿ ಕೇಳಿ ಬಂದ ಹಿನ್ನೆಯಲ್ಲಿ IRCTC (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಈಗ ಮಹತ್ತರ ಮಾಹಿತಿಯೊಂದು ಹೊರಡಿಸಿದೆ.
ಅಸಲಿಗೆ ರೈಲ್ವೇ ಇಲಾಖೆ, ಪ್ರಯಾಣದ ವೇಳೆಯಲ್ಲಿ ರೈಲು ಪ್ಯಾಂಟ್ರಿಯಲ್ಲಿ ಸಿಗುವ ಆಹಾರದ ಬೆಲೆಯಲ್ಲಿ ಏರಿಕೆ ಮಾಡಿದೆ ಅನ್ನೊ ಸುದ್ದಿ ಒಮ್ಮಿಂದೊಮ್ಮೆ ಹರಡಿದೆ. ಹಲವು ವೆಬ್ ಸೈಟ್‌ಗಳಲ್ಲಿ ಸಿಕ್ಕ ಮಾಹಿತಿ ಈ ಸುದ್ದಿಗೆ ಇನ್ನಷ್ಟು ಪುಷ್ಠಿ ಕೊಟ್ಟಿತ್ತು. ಪ್ರಯಾಣಿಕರಲ್ಲಿ ಇದರ ಬಗ್ಗೆ ಹೆಚ್ಚು ಗೊಂದಲ ಉಂಟಾಗಿದ್ದನ್ನ ಗಮನಿಸಿದ ಇಲಾಖೆ, ಕೊನೆಗೆ ಸ್ವತಃ IRCTCಯೇ ಈ ಬಗ್ಗೆ ಸ್ಪಷ್ಟಿಕರಣವನ್ನ ಕೊಟ್ಟಿದೆ. ಸದ್ಯಕ್ಕೆ ಪ್ರಯಾಣದ ವೇಳೆಯಲ್ಲಿ ಸಿಗುವ ಆಹಾರಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಅಲ್ಲದೇ IRCTC ಈಗ ಹೊಸ ಎ-ಲಾ-ಕಾರ್ಟೆ ಮೆನುವನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವುದೇ ಆಹಾರಗಳ ದರವನ್ನ ಬದಲಾಯಿಸಿಲ್ಲ. ಕೆಲ ದಿನಗಳ ಹಿಂದಷ್ಟೆ ರೈಲ್ವೆ ಇಲಾಖೆ ಹೊಸ ಮೆನು ಹಾಗೂ ಅದರ ದರವನ್ನ ನಿರ್ಧರಿಸುವ ಸ್ವಾತಂತ್ರ IRCTCಗೆ ನೀಡಿತ್ತು. ಆದರೆ ಸದ್ಯಕ್ಕೆ ಯಾವುದರದ್ದೂ ಬೆಲೆ ಏರಿಸುವ ಅವಶ್ಯಕತೆ ಇಲ್ಲ ಎಂದು IRCTC ಹೇಳಿದೆ.
2019 ರಿಂದ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ರೈಲಿನಲ್ಲಿ ಆಹಾರ ಹಾಗೂ ಪಾನೀಯಗಳ ಸೇವೆಯನ್ನ ಕೊಡುತ್ತಿದೆ. ಅಂದಿನ ಬೆಲೆಯೇ, ಇಂದು ಕೂಡ ಪ್ರಯಾಣಿಕರಿಗೆ ಲಭ್ಯವಾಗುವಂತೆ ಇಲಾಖೆ ಗಮನವಹಿಸಿದೆ. ಸದ್ಯಕ್ಕೆ ಬೆಲೆ ಏರಿಕೆಯ ತಲೆಬಿಸಿಯನ್ನ ಬಿಟ್ಟಾಕಿ ರೈಲು ಪ್ರಯಾಣವನ್ನ ನೆಮ್ಮದಿಯಾಗಿ ಮಾಡಿ ಆನಂದಿಸಿ. ಈ ರೀತಿಯ ವದಂತಿಗಳಿಗೆ ಗಮನ ಕೊಡುವ ಅವಶ್ಯಕತೆ ಇಲ್ಲ ಎಂದು IRCTC ವಕ್ತಾರ ಸಿದ್ಧಾರ್ಥ್ ಸಿಂಗ್ ಹೇಳಿದ್ದಾರೆ.