ನ್ಯೂಯಾರ್ಕ್: ಒಂದು ಪಾರ್ಟಿಗೆ ನೀವು ಇಷ್ಟಪಟ್ಟು ಹೋಗುವಾಗ ಹಲವು ಕಾರಣಗಳಿಂದಾಗಿ ನಿರಾಸೆಗೆ ತುತ್ತಾಗಬಹುದು. ಟಿಕೆಟ್ ಇಲ್ಲ, ಸ್ನೇಹಿತರ ಗುಂಪು ಸರಿ ಇಲ್ಲ, ಪಾರ್ಟಿಯ ನಿಯಮಗಳ ಪ್ರಕಾರ ಡ್ರೆಸ್ ಹಾಕಿಲ್ಲ ಎಂದು ಬಾಗಿಲ್ಲಲ್ಲೇ ಬೌನ್ಸರ್‍ಗಳು ನಿಮ್ಮನ್ನು ತಡೆಯಬಹುದು.
ಇದೇ ರೀತಿಯ ಭಾರಿ ನಿರಾಸೆಗೆ ಅಮೆರಿಕದ ಫ್ಯಾಲ್ಲನ್ ಮಿಲಿಲ್ಲೊನ್ ಗುರಿಯಾಗಿದ್ದಾರೆ. ತಮ್ಮ ನೋವನ್ನು ಟಿಕ್‍ಟಾಕ್‍ನಲ್ಲಿ ತೋಡಿಕೊಂಡಿದ್ದಾರೆ. ಮಯಾಮಿಯಲ್ಲಿನ ಪೂಲ್ ಪಾರ್ಟಿಗಾಗಿ ಆಕೆ ಟಿಕೆಟ್ ಖರೀದಿಸಿದ್ದರು. ಆದರೆ ಟಿಕೆಟ್‍ನ ಕೆಳಗಡೆ ಇದ್ದ ಷರತ್ತುಗಳನ್ನು ಗಮನಿಸಿದಾಗ ಮನಸ್ಸಿಗೆ ಆಘಾತ ಅನುಭವಿಸಿದ್ದಾಳೆ.
BIG NEWS: ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾ ಆಗುತ್ತೆ; ಅವರ ಬಾಯಲ್ಲಿ ಉಲ್ಟಾ ಮಚ್ಚೆಯಿದೆ ಎಂದ ಸಿ.ಟಿ.ರವಿ
” ದಢೂತಿ ಯುವತಿಯರಿಗೆ ಪಾರ್ಟಿಗೆ ಪ್ರವೇಶವಿಲ್ಲ” ಎಂಬ ಖಡಕ್ ಷರತ್ತನ್ನು ಆಯೋಜಕರು ಇರಿಸಿದ್ದಾರೆ. ದೇಹದ ಗಾತ್ರದ ಆಧಾರದ ಮೇಲೆ ಆಯೋಜಕರು ಟಿಕೆಟ್ ಸೀಮಿತಗೊಳಿಸಿ ದೈಹಿಕ ವಿವಿಧತೆ ಅವಮಾನ ಮಾಡಿದ್ದಾರೆ. ನಿಸರ್ಗದಲ್ಲಿ ದೈಹಿಕ ವಿವಿಧತೆಯು ಅದರ ಸೌಂದರ್ಯವಿದ್ದಂತೆ. ಎಲ್ಲರೂ ಸಾಧಾರಣ ಮೈಕಟ್ಟು ಹೊಂದಿರುವವರೇ, ಆದರೆ ಸಮವಸ್ತ್ರ ತೊಟ್ಟಂತೆ ಇರುವುದಿಲ್ಲವೇ. ಪ್ರಾಣಿ, ಸಸ್ಯಲೋಕದಲ್ಲಿ ಈ ತರ ವೈವಿಧ್ಯತೆ ಇಲ್ಲವೇ ಎಂದು ತಮ್ಮ ಟಿಕ್‍ಟಾಕ್ ಖಾತೆ ಮೂಲಕ ವಿಡಿಯೊ ಮಾಡಿ ಜನರನ್ನು ಪ್ರಶ್ನಿಸಿದ್ದಾಳೆ. ಸಾಮಾಜಿಕ ಜಾಲತಾಣಿಗರ ಆಕ್ರೋಶಕ್ಕೆ ಮಣಿದು ಆಯೋಜಕರು ಟಿಕೆಟ್ ಹಣವನ್ನು ಆಕೆಗೆ ವಾಪಸ್ ಮಾಡಿದ್ದಾರೆ. ಆದರೆ ತಮಗಾದ ನೋವು ಇದರಿಂದ ಮಾಯುವುದಿಲ್ಲ ಎಂದು ಫ್ಯಾಲ್ಲನ್ ಹೇಳಿಕೊಂಡಿದ್ದಾರೆ.
https://www.youtube.com/watch?v=njJsW145Hc4&feature=emb_logo