ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಲಾಟರಿಯಿಂದ ಅದೃಷ್ಟ ಖುಲಾಯಿಸಿ ಕೆಲವರು ಈ ಜಾಕ್ ಪಾಟ್ ಹೊಡೆಯುತ್ತಾರೆ. ಅಮೆರಿಕಾದ ನಿವೃತ್ತ ಮೆಕ್ಯಾನಿಕ್ ಅರ್ಲ್ ಲ್ಯಾಪ್ ಎಂಬುವವರಿಗೂ ಈ ಜಾಕ್ ಪಾಟ್ ಹೊಡೆದಿದೆ. ಮೊದಲಿಗೆ ಇದನ್ನು ನಂಬದ ಅವರು, ಏಪ್ರಿಲ್ ಫೂಲ್ ಎಂದೇ ಅಂದುಕೊಂಡಿದ್ದರಂತೆ.
61 ವರ್ಷದ ನಿವೃತ್ತ ಮೆಕ್ಯಾನಿಕ್ ಅರ್ಲ್ ಲ್ಯಾಪ್ $ 40 ಮಿಲಿಯನ್ ಲೊಟ್ಟೊ ಅಮೆರಿಕ ಲಾಟರಿ ಗೆದ್ದಿದ್ದಾರೆ. ಏಪ್ರಿಲ್ 1ರ ಮೂರ್ಖರ ದಿನದಂದು ಟಿಕೆಟ್ ಖರೀದಿಸಿದರು. ಹೀಗಾಗಿ ಇದು ತಮಾಷೆ ಎಂದೇ ಅವರು ಭಾವಿಸದ್ದರು. ಲಾಟರಿ ಖರೀದಿಸಿದ ಅಂಗಡಿ ಮಾಲೀಕ ದೃಢಪಡಿಸಿದ ನಂತರವೇ ಇದು ತಮಾಷೆಯಲ್ಲ ನಿಜವಾಗಲೂ ತಾನು ಲಾಟರಿ ಗೆದ್ದಿದ್ದೇನೆ ಎಂದು ಅವರಿಗೆ ಮನವರಿಕೆಯಾಗಿದೆ.
ಅಂದಹಾಗೆ, ಲ್ಯಾಪ್ ತನ್ನ ಗೆಲುವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ್ರು. ಲಾಟರಿಯಿಂದ ಗೆದ್ದ ಹಣವನ್ನು ತನ್ನ ಕುಟುಂಬಕ್ಕೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲ್ಯಾಪ್ ತೀರ್ಮಾನಿಸಿದ್ದಾರೆ.
ವೈದ್ಯಕೀಯ ಸಮಸ್ಯೆಗಳಿರುವ ಮಕ್ಕಳಿಗೆ ಅನುಕೂಲವಾಗುವಂತೆ ದೇಣಿಗೆಗಳನ್ನು ನೀಡುವುದಾಗಿ ಸಹ ಲ್ಯಾಪ್ ಹೇಳಿದ್ದಾರೆ.