ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ವತಿಯಿಂದ ಪದವಿ ನೀಟ್ ನ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಅ. 1ರಿಂದ ಶೈಕ್ಷಣಿಕ ತರಗತಿಗಳನ್ನು ಆರಂಭಿಸುವಂತೆ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.
ಆಲ್ ಇಂಡಿಯಾ ಕೋಟಾದ ಎರಡನೇ ಸುತ್ತಿನ ಕೌನ್ಸೆಲಿಂಗ್ ಅನ್ನು ಸೆ. 19ರೊಳಗೆ ಪೂರ್ಣಗೊಳಿಸಬೇಕು. ಸೆ. 28 ರಿಂದ 30ರೊಳಗೆ ಅಭ್ಯರ್ಥಿಗಳ ಮಾಹಿತಿಯನ್ನು ಮೆಡಿಕಲ್ ಕೌನ್ಸೆಲಿಂಗ್ ಕಮಿಟಿಗೆ ಕಳುಹಿಸಬೇಕು. ರಾಜ್ಯ ಮಟ್ಟದಲ್ಲಿ ಸೆ. 27ರೊಳಗೆ ಕೌನ್ಸೆಲಿಂಗ್ ಪೂರ್ಣಗೊಳಿಸಿ ಅ.6ರಿಂದ 8ರೊಳಗೆ ಮಾಹಿತಿ ರವಾನೆ ಮಾಡಬೇಕು. ಈ ಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸೆ. 27, ರಾಜ್ಯಮಟ್ಟದಲ್ಲಿ ಸೆ.5ರೊಳಗೆ ಪ್ರವೇಶ ಪಡೆಯಬೇಕು. ಇನ್ನು ರಾಜ್ಯಮಟ್ಟದಲ್ಲಿ ಅ. 9ರಿಂದ 18ರೊಳಗೆ ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಅ. 23ರೊಳಗೆ ಪ್ರವೇಶ ಪಡೆಯಬೇಕೆಂದು ಹೇಳಲಾಗಿದೆ.
ಮೂರನೇ ಸುತ್ತಿನ ನಂತರ ಉಳಿಕೆಯಾಗುವ ಸೀಟುಗಳನ್ನು ಭರ್ತಿ ಮಾಡಲು ನಡೆಸುವ ಮುಂದುವರೆದ ಕೌನ್ಸೆಲಿಂಗ್ ಅನ್ನು ಅ. 25 ರಿಂದ 29ರೊಳಗೆ ನಡೆಸಿ ನ. 5ರೊಳಗೆ ಅಭ್ಯರ್ಥಿಗಳು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಬೇಕೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚನೆ ನೀಡಿದೆ.