ನವದೆಹಲಿ: ಮುಂದಿನ ವರ್ಷ್ಯಾಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಮುಂದಾಗಿದೆ.
ದೇಶದಲ್ಲಿ ವೈದ್ಯ ವೃತ್ತಿಯನ್ನು ಕೇಂದ್ರೀಕೃತಗೊಳಿಸುವ ಉದ್ದೇಶದಿಂದ ವೈದ್ಯಕೀಯ ಆಯೋಗ ದೇಶದ ಎಲ್ಲಾ ವೈದ್ಯರಿಗೂ ಯುಐಡಿ ಸಂಖ್ಯೆಯನ್ನು ನೀಡಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ನೋಂದಣಿ ರಚನೆಗೆ ಸಿದ್ಧತೆ ನಡೆಸಲಾಗಿದೆ.
ಆಯೋಗದ ನೀತಿ ನಿಯಮಗಳ ಮತ್ತು ವೈದ್ಯಕೀಯ ನೋಂದಣಿ ಮಂಡಳಿ ಸದಸ್ಯ ಡಾ. ಯೋಗೇಂದ್ರ ಮಲಿಕ್ ಈ ಬಗ್ಗೆ ಮಾಹಿತಿ ನೀಡಿ, ಮುಂದಿನ ಆರು ತಿಂಗಳಲ್ಲಿ ಪ್ರಾಯೋಗಿಕ ಯೋಜನೆಗೆ ಚಾಲನೆ ಸಿಗಲಿದ್ದು, 2024ರ ಅಂತ್ಯದ ವೇಳೆಗೆ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಪ್ರಸ್ತುತ ಸುಮಾರು 14 ಲಕ್ಷ ವೈದ್ಯರು IMR ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ವೈದ್ಯಕೀಯ ನೋಂದಣಿಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.