ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನಿವಾರ್ ಚಂಡಮಾರುತ ಎದ್ದಿದ್ದು ತಮಿಳುನಾಡಿನ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.
ಮಂಗಳವಾರದಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಳೆ 13 ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ನವೆಂಬರ್ 26 ರಂದು 13 ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದ್ದಾರೆ.
ತಿರುವಳ್ಳೂರು, ಚೆಂಗಲ್ಪಟ್ಟು, ತಿರುವಣ್ಣಾಮಲೈ, ವಿಲ್ಲೂಪುರಂ, ನಾಗಪಟ್ಟಣಂ, ತಂಜಾವೂರು, ಕಾಂಚಿಪುರಂ ಚೆನ್ನೈ ಸೇರಿದಂತೆ 13 ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಮನೆಯಿಂದ ಹೊರಬರದಂತೆ ಜನರಿಗೆ ಮನವಿ ಮಾಡಲಾಗಿದೆ. ಚಂಡಮಾರುತದ ಪರಿಣಾಮ ಚೆನ್ನೈ ಮಹಾನಗರ ಸೇರಿ ಹಲವೆಡೆ ಹಲವೆಡೆ ಬಿರುಗಾರಲಿ ಸಹಿತ ಮಳೆ ಆರ್ಭಟಿಸುತ್ತಿದೆ. ಇದು ಇನ್ನೂ ತೀವ್ರ ಸ್ವರೂಪ ಪಡೆಯಬಹುದೆಂದು ಹೇಳಲಾಗಿದೆ.