
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾನುವಾರ ನವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಉಪಸ್ಥಿತರಿರುವ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಅವಿವೇಕದ ಹೇಳಿಕೆ ನೀಡಿದ್ದಾರೆ. ಎನ್‌ಡಿಎ 4,000 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದು, ನಿತೀಶ್ ಕುಮಾರ್ ಅವರ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.
ಜೆಡಿಯು ಮುಖ್ಯಸ್ಥರಾಗಿರುವ ಮತ್ತು ಮೂರು ತಿಂಗಳ ಹಿಂದೆ ಬಿಜೆಪಿ ನೇತೃತ್ವದ ಸಮ್ಮಿಶ್ರಕ್ಕೆ ಮರಳಿದ ಕುಮಾರ್, ನವಾಡ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮಾತನಾಡಿದ ಅವರು ಇಂತಹ ಹೇಳಿಕೆ ನೀಡಿದ್ದಾರೆ.
ನಿತೀಶ್ ಕುಮಾರ್ ಹೇಳಿದ್ದೇನು?
ಪ್ರಧಾನಮಂತ್ರಿಯವರ ಮುಂದೆ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ, ನಿತೀಶ್ ಕುಮಾರ್ ಅವರು “ಚಾರ್ ಲ್ಯಾಕ್(ನಾಲ್ಕು ಲಕ್ಷ)” ಎಂದು ಮುಜುಗರಕ್ಕೊಳಗಾಗುವಂತೆ ಹೇಳಿದರು, ನಂತರ ತಮ್ಮನ್ನು ತಾವು ಸರಿಪಡಿಸಿಕೊಂಡು “ಚಾರ್ ಹಜಾರ್ ಸೆ ಭಿ ಝ್ಯಾದಾ(4,000 ಕ್ಕಿಂತ ಹೆಚ್ಚು)” ಎಂದು ಹೇಳುವುದನ್ನು ಕೇಳಬಹುದು. ಅವರು ಚುನಾವಣೆಯಲ್ಲಿ “400 ಪ್ಲಸ್ ” ಎಂದು ಹೇಳುವ ಬದಲು ಹೀಗೆಲ್ಲಾ ಹೇಳಿದ್ದಾರೆ.
ಅವರ ಭಾಷಣದ ನಂತರ, ನಿತೀಶ್ ಕುಮಾರ್ ಅವರ ಪಕ್ಕದಲ್ಲಿ ಕುಳಿತಿದ್ದಾಗ ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿತು.
ಆರ್‌ಜೆಡಿ ವಕ್ತಾರೆ ಸಾರಿಕಾ ಪಾಸ್ವಾನ್ ಸೇರಿದಂತೆ ಹಲವಾರು ಆರ್‌ಜೆಡಿ ನಾಯಕರು, ನಿತೀಶ್ ಕುಮಾರ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯವರು ಪ್ರಧಾನಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಸಂಸದರನ್ನು ಹಾರೈಸಲು ಬಯಸಿದ್ದರು. ಆಗ ಅವರು ಬಹುಶಃ ಇದು ತುಂಬಾ ಹೆಚ್ಚು ಮತ್ತು 4,000 ಸಾಕು ಎಂದು ಭಾವಿಸಿದ್ದಾರೆ ಎಂದು ಹೇಳಿದ್ದಾರೆ.