ಪಾಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಾಜ್ಯದ ಯುವಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದೆ.
ಶುಕ್ರವಾರ ಸಂಜೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಬಿಹಾರ ಸರ್ಕಾರವು ರಾಜ್ಯದಾದ್ಯಂತ ನಿರುದ್ಯೋಗಿ ಯುವಕರಿಗೆ “ನಿರುದ್ಯೋಗ ಭತ್ಯೆ” ಯನ್ನು ನೀಡಲು ನಿರ್ಧರಿಸಲಾಯಿತು. ನಿತೀಶ್ ಕುಮಾರ್ ಅವರ ನೇತೃತ್ವದ ಕ್ಯಾಬಿನೆಟ್, MNREGA ಅಡಿಯಲ್ಲಿ ನಿಬಂಧನೆಗಳನ್ನು ಒಳಗೊಂಡಿರುವ ಬಿಹಾರ ನಿರುದ್ಯೋಗ ಭತ್ಯೆ ನಿಯಮಗಳು 2024 ಅನ್ನು ಅನುಮೋದಿಸಿತು.
ಹೊಸದಾಗಿ ಅನುಮೋದಿಸಲಾದ ನಿಯಮಗಳ ಪ್ರಕಾರ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ನಂತರ ನಿರುದ್ಯೋಗಿಗಳಾಗಿ ಉಳಿಯುವ ಅರ್ಹ ವ್ಯಕ್ತಿಗಳು ರಾಜ್ಯ ಸರ್ಕಾರದಿಂದ ದೈನಂದಿನ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ. ಈ ಭತ್ಯೆಯು ತಮ್ಮ ಅರ್ಜಿಯ ದಿನಾಂಕದಿಂದ ಪ್ರಾರಂಭಿಸಿ, ನಿರ್ದಿಷ್ಟ ಮಿತಿಯೊಳಗೆ ಹಣಕಾಸಿನ ನೆರವು ನೀಡಲಾಗುವುದು.
ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಹಾರದ ಯುವಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭತ್ಯೆ ನೀಡಲಾಗುವುದು ಎನ್ನಲಾಗಿದೆ.